ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 21 ದಲಿತರ ಹತ್ಯೆ; ಮೂವರಿಗೆ ಗಲ್ಲು, 20 ಮಂದಿಗೆ ಜೀವಾವಧಿ (3 given death | 20 life imprisonment | 21 Dalits in 1996 | Ranvir Sena)
Bookmark and Share Feedback Print
 
1996ರಲ್ಲಿ ಬಿಹಾರದ ಭೋಜ್‌ಪುರ ಜಿಲ್ಲೆಯ ಬಥಾನಿ ತೋಲಾ ಎಂಬಲ್ಲಿ 21 ದಲಿತರನ್ನು ಜಮೀನ್ದಾರರ ಕುಮ್ಮಕ್ಕಿನಿಂದ ಎಗ್ಗಿಲ್ಲದೆ ಕೊಂದು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ನ್ಯಾಯಾಲಯವು ಮೂರು ಮಂದಿಗೆ ಮರಣ ದಂಡನೆ ಹಾಗೂ ಇತರ 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಕೆ. ಶ್ರೀವಾತ್ಸವ ಅವರು ಇಂದು ತಪ್ಪಿತಸ್ತರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

1996ರ ಜುಲೈ 11ರಂದು ಸಹರಾ ಬ್ಲಾಕ್‌ನಲ್ಲಿನ ಬಥಾನಿ ತೋಲಾ ಎಂಬಲ್ಲಿ 21 ದಲಿತರನ್ನು ಕೊಂದು ಹಾಕಲಾಗಿದ್ದ ಈ ಪ್ರಕರಣದ ಅಂತಿಮ ತೀರ್ಪನ್ನು ಮೇ 5ರಂದು ಈ ನ್ಯಾಯಾಲಯ ನೀಡಿತ್ತು. ಇದರಲ್ಲಿ 23 ಮಂದಿಯ ಆರೋಪ ಸಾಬೀತಾಗಿತ್ತು.

ಸ್ಥಳೀಯ ಜಮೀನ್ದಾರರ ಖಾಸಗಿ ಪಡೆಗಳು ಈ ದಾಳಿ ನಡೆಸಿದ್ದವು. ಇವರನ್ನು 'ರಣವೀರ್ ಸೇನೆ' ಕಾರ್ಯಕರ್ತರು ಎಂದು ಗುರುತಿಸಲಾಗಿದೆ.

ರಣವೀರ್ ಸೇನೆಯ ಸುಮಾರು 70ಕ್ಕೂ ಹೆಚ್ಚು ಮಂದಿ ಗ್ರಾಮಕ್ಕೆ ದಾಳಿ ಮಾಡಿ ಬಹುತೇಕ ಮಹಿಳೆಯರು ಮತ್ತು ಮಕ್ಕಳನ್ನು ಕೊಂದು ಹಾಕಿದ್ದರು.

ಈ ಹಿಂದೆ ನ್ಯಾಯಾಲಯವು 30 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ