ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತಾರಿ ಹತ್ಯಾಕಾಂಡ: ಕೋಲಿಗೆ ಎರಡನೇ ಮರಣದಂಡನೆ (Nithari | Rimpa Haldar | Surinder Singh Koli | Moninder Singh Pandher)
Bookmark and Share Feedback Print
 
ಏಳರ ಹರೆಯದ ಆರತಿ ಎಂಬ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣದಲ್ಲಿ ಸುರೀಂದರ್ ಕೋಲಿ ದೋಷಿಯೆಂಬುದು ಸಾಬೀತಾಗಿದ್ದು, ನಿತಾರಿ ಎರಡನೇ ಪ್ರಕರಣದ ಏಕೈಕ ಆರೋಪಿಗೆ ಗಾಜಿಯಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ಸಿಂಗ್ ಅವರು 38ರ ಹರೆಯದ ಕೋಲಿ ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಮೇ 6ರಂದು ತೀರ್ಪು ನೀಡಿದ್ದರು.

ಅದೇ ಹೊತ್ತಿಗೆ ಮೋನಿಂದರ್ ಸಿಂಗ್ ಪಂಧೇರ್ ಈ ಪ್ರಕರಣದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಂಡರೆ ಅದಕ್ಕೆ ಸಿಬಿಐಯೇ ಹೊಣೆ ಎಂದು ನಿತಾರಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿತಾರಿಯ ಪಂದೇರ್ ನಿವಾಸದ ಸುತ್ತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದು ಎರಡನೇ ಮರಣದಂಡನೆ...
ನೋಯ್ಡಾದ ಸೆಕ್ಟರ್ 31ರ ನಿತಾರಿಯಲ್ಲಿನ ಕೋಲಿಯ ಉದ್ಯೋಗದಾತ ಮೋನಿಂದರ್ ಸಿಂಗ್ ಪಂದೇರ್ ಬಂಗಲೆ ಪಕ್ಕದ ಚರಂಡಿಯಲ್ಲಿ ಪತ್ತೆಯಾದ 19 ಸ್ತ್ರೀಯರು ಮತ್ತು ಮಕ್ಕಳ ಮೃತದೇಹಗಳ ಭಾಗಗಳ ಪೈಕಿ ಆರತಿ ದೇಹದ ಭಾಗಗಳೂ ದೊರಕಿದ್ದವು.

ಇದರ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ, ಫೆಬ್ರವರಿ 2009ರಲ್ಲಿ ಪಂಧೇರ್ ಮತ್ತು ಕೋಲಿಯ ಮೇಲೆ ರಿಂಪಾ ಹಲ್ದಾರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆಧಾರದಲ್ಲಿ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಇದಕ್ಕೆ ಕೆಲವೇ ಸಮಯದ ಹಿಂದೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿದ್ದು, ಪ್ರಕರಣ ವಿಚಾರಣೆಯಲ್ಲಿದೆ.

ಪ್ರಸಕ್ತ ಆರತಿ ಪ್ರಕರಣದಲ್ಲಿ ನೀಡಿರುವ ಗಲ್ಲು ಶಿಕ್ಷೆಯನ್ನು ಕೂಡ ಸುರೀಂದರ್ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ