ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್ ಕಾಪ್ಟರ್ ದುರಂತದಲ್ಲಿ ಯಾರ ಕೈವಾಡವೂ ಇಲ್ಲ: ಸಿಬಿಐ (YSR | CBI | Helicopter Crash | Andhra Pradesh Chief Minister Y S R Reddy)
ಆಂಧ್ರಪ್ರದೇಶ ಮುಖ್ಯಮಂತ್ರಿ ದಿ.ವೈ.ಎಸ್.ರಾಜಶೇಖರ ರೆಡ್ಡಿ ಅವರ ಹೆಲಿಕಾಪ್ಟರ್ ದುರಂತದ ಹಿಂದೆ ಯಾರ ಕೈವಾಡವೂ ಇಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ವೈ.ಎಸ್.ಆರ್.ರೆಡ್ಡಿ ಅವರ ದುರ್ಮರಣದ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿದ್ದು ಇದೀಗ ವರದಿ ನೀಡಿದೆ. ವರದಿಯಲ್ಲಿ ಈ ದುರಂತ ಕೇವಲ ಒಂದು ಆಕಸ್ಮಿಕ ಘಟನೆಯಾಗಿದ್ದು, ಪೈಲೆಟ್ ದಾರಿ ತಪ್ಪಿದ ಕಾರಣ ಅಥವಾ, ಹವಾಮಾನ ಪ್ರತಿಕೂಲವಾಗಿದ್ದರಿಂದ ಪೈಲೆಟ್ ಹೆಲಿಕಾಪ್ಟರನ್ನು ಬೇರೆಡೆ ತಿರುಗಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆಂಧ್ರದ ಕರ್ನೂಲ್ ಜಿಲ್ಲೆಯ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ 2009ರ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿ ವೈ.ಎಸ್.ಆರ್.ರೆಡ್ಡಿ ಹೆಲಿಕಾಪ್ಟರ್ ದುರಂತದ ವೇಳೆ ದಾರುಣವಾಗಿ ಸಾವನ್ನಪ್ಪಿದ್ದರು. ಅವರ ಜೊತೆಗೆ ಅವರ ಮುಖ್ಯ ಕಾರ್ಯದರ್ಶಿ ಪಿ.ಸುಬ್ರಹ್ಮಣ್ಯಂ, ಮುಖ್ಯ ಭದ್ರತಾ ಅಧಿಕಾರಿ ಎ.ಎಸ್.ಸಿ.ವೆಸ್ಲೇ ಕೂಡಾ ದುರ್ಮರಣಕ್ಕೀಡಾಗಿದ್ದರು. ಈ ದುರ್ಘಟನೆಗೆ ಪೈಲೆಟ್‌ಗಳಾದ ಎಸ್.ಕೆ.ಭಾಟಿಯಾ ಹಾಗೂ ಎಂ.ಎಸ್.ರೆಡ್ಡಿ ಕೂಡಾ ಬಲಿಯಾಗಿದ್ದರು.
ಸಿಬಿಐ 2009ರ ಸೆಪ್ಟೆಂಬರ್ ತಿಂಗಳಿನಿಂದಲೇ ಈ ವಿರುದ್ಧ ತನ್ನ ತನಿಖೆ ಆಱಂಭಿಸಿದ್ದು, ಇದೀಗ ವಿಸ್ತೃತ ವರದಿ ನೀಡಿದೆ. ಹಲವು ದಾಖಲೆಗಳು ಹಾಗೂ ಸಾಕ್ಷಿಗಳನ್ನು ಪರಿಗಣಿಸಿ ಇದು ಕೇವಲ ಅಫಘಾತವಾಗಿದ್ದು, ಇದರ ಹಿಂದೆ ಯಾರ ಕೈವಾಡವೂ ಇಲ್ಲ ಎಂದು ವರದಿ ನೀಡಿದೆ. ಈ ವರದಿಯನ್ನು ಇಂದು ಆಂಧ್ರಪ್ರದೇಶ ಸರ್ಕಾರ ಹಾಗೂ ಕರ್ನೂಲ್ ಜಿಲ್ಲೆಯ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಲಾಗಿದೆ.