ಬಡತನ ಮನುಷ್ಯನನ್ನು ಯಾವ ಮಟ್ಟಕ್ಕೆ ತಳ್ಳುತ್ತೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ, ಬಡತನದ ಬೇಗೆ ತಾಳಲಾರದೆ ತಾಯಿಯೇ ತನ್ನ ಕರುಳ ಕುಡಿಗಳೆರಡನ್ನು ಮಾರಿದ ಘಟನೆ ಪಶ್ಚಿಮಬಂಗಾಳದ ತಮ್ಲೂಕ್ ಎಂಬಲ್ಲಿ ನಡೆದಿದೆ.
ಬಡತನ ತಾಳಲಾರದೇ ತನ್ನ ಇಬ್ಬರು ಮಕ್ಕಳನ್ನು ಮಾರಾಟ ಮಾಡಿದ್ದಳು, ಹೆಂಡದ ದಾಸನಾಗಿದ್ದ ಪತಿಯ ಸಹವಾಸವನ್ನು ಬಿಟ್ಟಿದ್ದ ಈಕೆ ಕಷ್ಟಪಟ್ಟು ಮಕ್ಕಳನ್ನು ಸಾಕುತ್ತಿದ್ದಳು. ಆದರೆ ಕೊನೆ, ಕೊನೆಗೆ ಈಕೆಗೆ ಬದುಕುವುದೇ ದುಸ್ತರವಾಗಿತ್ತು.
ಕೊನೆಗೂ ಆಕೆ ಮಕ್ಕಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಳು, ಹಾಗಾಗಿ ತನ್ನ ಎರಡು ಮಕ್ಕಳನ್ನು 7 ಮತ್ತು 3ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ.
ತನ್ನ ಹೆಂಡತಿ ಮಕ್ಕಳನ್ನು ಮಾರಾಟ ಮಾಡಿದ್ದಾಳೆಂದು ದೂರಿ ಈಕೆಯ ಪರಿತ್ಯಕ್ತ ಗಂಡ ಪೊಲೀಸರಿಗೆ ದೂರು ನೀಡಿದ್ದ. ಆ ದೂರಿನ ಆಧಾರದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.