ನಗರದ ರೈಲು ನಿಲ್ದಾಣದಲ್ಲಿ ಅಂತಿಮ ಘಳಿಗೆಯ ಸಮಯದಲ್ಲಿ ಫ್ಲಾಟ್‌ಫಾರ್ಮ್ ಬದಲಾಗಿದ್ದರಿಂದ ಉಂಟಾದ ಪ್ರಯಾಣಿಕರ ನೂಕು ನುಗ್ಗಲಿನಲ್ಲಿ ಇಬ್ಬರು ಸಾವನ್ನಪ್ಪಿ ಹಲವಾರು ಪ್ರಯಾಣಿಕರು ಗಾಯಗೊಂಡ ದಾರುಣ ಘಟನೆ ವರದಿಯಾಗಿದೆ.
ರವಿವಾರವಾಗಿದ್ದರಿಂದ ರೈಲ್ವೆ ನಿಲ್ದಾಣದಲ್ಲಿ ಭಾರಿ ಜನಜಂಗುಳಿಯಿಂದ ಕೂಡಿತ್ತು.ನವದೆಹಲಿಯಿಂದ ಬಿಹಾರ್‌ಗೆ ತೆರಳುತ್ತಿದ್ದ ಬಿಹಾರ್ ಸಂಪರ್ಕ ಕ್ರಾಂತಿ ರೈಲಿಗಾಗಿ ಪ್ರಯಾಣಿಕರು ನಿರೀಕ್ಷಿಸುತ್ತಿದ್ದರು. ಆದರೆ ಅಂತಿಮ ಕ್ಷಣಗಳಲ್ಲಿ ರೈಲ್ವೆ ಇಲಾಖೆ ಫ್ಲಾಟ್‌ಫಾರ್ಮ್ ಸಂಖ್ಯೆಯನ್ನು ಬದಲಿಸಿದ್ದರಿಂದ ಪ್ರಯಾಣಿಕರು ರೈಲು ಹಿಡಿಯಲು ಓಡುತ್ತಿರುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತಂತೆ ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ತನಿಖೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿಕೆಯೊಂದನ್ನು ನೀಡಿ, ಮೃತ ಕುಟುಂಬಕ್ಕೆ 2 ಲಕ್ಷ ರೂಪಾಯಿ ನಗದು ಪರಿಹಾರ ಘೋಷಿಸಿದ್ದಾರೆ.