ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರು ಪ್ರಕರಣ ಏನಾಯ್ತು?: ದೆಹಲಿ ಸರ್ಕಾರಕ್ಕೆ ಕೇಂದ್ರದ ಗರಂ ಪತ್ರ! (Death penalty | Kasab | Afzal Guru | 26/11)
Bookmark and Share Feedback Print
 
ಮುಂಬೈ ದಾಳಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊನೆಗೂ ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾಗಿದೆ. ಆದರೆ ಇದಕ್ಕೂ ಮೊದಲೇ ಮರಣ ದಂಡನೆ ಶಿಕ್ಷೆಗೆ ಗುರಿಯಾದ ಕುಖ್ಯಾತ ಅಫ್ಜಲ್ ಗುರುವಿನ ಕ್ಷಮಾದಾನ ಅರ್ಜಿಯನ್ನು ಬಹುಬೇಗನೆ ಇತ್ಯರ್ಥಗೊಳಿಸುವಂತೆ ಇದೀಗ ಕೇಂದ್ರ ಗೃಹಸಚಿವಾಲಯ ದೆಹಲಿ ಸರ್ಕಾರಕ್ಕೆ ತೀಕ್ಷ್ಣವಾದ ಪತ್ರ ಬರೆದಿದೆ.

ಅಜ್ಮಲ್ ಕಸಬ್ ಅವರನ್ನು ಗಲ್ಲಿಗೇರಿಸಬೇಕಾದರೆ, ಇದಕ್ಕೂ ಮೊದಲು ಗಲ್ಲಿಗೇರಲು ಸರತಿಯ ಸಾಲಲ್ಲಿ ನಿಂತ ಆರೋಪಿಗಳು ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಅವರ ಪೈಕಿ ಪಾರ್ಲಿಮೆಂಟ್ ದಾಳಿಯ ರುವಾರಿ ಅಫ್ಜಲ್ ಗುರು ಕೂಡಾ ಒಬ್ಬ. ಆದರೆ 2006ರಲ್ಲಿ ಶಿಕ್ಷೆಯ ತೀವ್ರತೆಯನ್ನು ಕಡಿಮೆಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಆರು ಹಂತದ ಅಫ್ಜಲ್ ಗುರುವಿನ ಪ್ರಕರಣದಲ್ಲಿ ರಾಷ್ಟ್ರಪತಿಯ ಅಂತಿಮ ನಿರ್ಧಾರ ಹೊರಬೀಳುವ ಮೊದಲು ಅದನ್ನು ಗೃಹಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಗೃಹಸಚಿವಾಲಯ ಅದನ್ನು ಸಂಬಂಧಿಸಿದ ರಾಜ್ಯಕ್ಕೆ ಕಳುಹಿಸಬೇಕಾಗುತ್ತದೆ. ರಾಜ್ಯದ ನಿರ್ಧಾರದ ನಂತರ ಅದು ಮತ್ತೆ ಗೃಹ ಸಚಿವಾಲಯದ ಮೂಲಕವಾಗಿ ರಾಷ್ಟ್ರಪತಿಯವ ಅಂತಿಮ ನಿರ್ಧಾರಕ್ಕೆ ಕಳುಹಿಸಲಾಗುತ್ತದೆ.

ಅಫ್ಜಲ್ ಗುರುವಿನ ಪ್ರಕರಣದಲ್ಲಿ 2002ರ ಡಿ.18ರಂದು ಗಲ್ಲು ಶಿಕ್ಷೆ ತೀರ್ಪು ನೀಡಲಾದರೂ, ಅಕ್ಟೋಬರ್ 2003ರಲ್ಲಿ ಹೈಕೋರ್ಟ್ ಇದೇ ತೀರ್ಪನ್ನು ಎತ್ತಿ ಹಿಡಿದಿತ್ತು. 2005 ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ಕೂಡಾ ಇದನ್ನೇ ಎತ್ತಿ ಹಿಡಿಯಿತು. 2006ರ ಜನವರಿ ತಿಂಗಳಲ್ಲಿ ಅಫ್ಜಲ್ ಗುರುವಿನ ಕುಟುಂಬದ ಪರವಾಗಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಆ ಅರ್ಜಿಯ ಕುರಿತು ಯಾವುದೇ ಬೆಳವಣಿಗೆ ಕಂಡು ಬಂದಿಲ್ಲದೆ ಇರುವುದರಿಂದ ಗೃಹ ಸಚಿವಾಲಯ ದೆಹಲಿ ಸರ್ಕಾರಕ್ಕೆ ಎಚ್ಚರಿಸಿದ್ದು, ಅರ್ಜಿಯ ವಿಳಂಬಕ್ಕೆ ಕಾರಣ ಕೇಳಿ ಪತ್ರ ಬರೆದಿದೆ. ಅಫ್ಜಲ್ ಗುರು ಪ್ರಕರಣ ಬಗೆಹರಿದರೆ, ಕಸಬ್ ಪ್ರಕರಣಕ್ಕೆ ಬೇಗ ಚಾಲನೆ ಸಿಗುತ್ತದೆ.

ಆದರೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ನನಗೆ ಈವರೆಗೂ ಯಾವುದೇ ಪತ್ರ ತಲುಪಿಲ್ಲ. ನನ್ನ ರಾಜ್ಯ ಸರ್ಕಾರದ ಗೃಹ ಸಚಿವಾಲಯಕ್ಕೆ ಇಂಥ ಪತ್ರ ತಲುಪಿರಬಹುದೇನೋ ಎಂದು ಉತ್ತರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ