ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇದು ಸಾನಿಯಾ ಭಾಬಿ ಗುಟ್ಕಾ: ಶೇ.76 ಎಕ್ಸ್‌ಟ್ರಾ ಸ್ಟ್ರಾಂಗ್! (Sania Mirza | Shoaib Malik | Tennis | Cricket | Sania Bhabhi Gutka)
ಇದು ಸಾನಿಯಾ ಭಾಬಿ ಗುಟ್ಕಾ: ಶೇ.76 ಎಕ್ಸ್‌ಟ್ರಾ ಸ್ಟ್ರಾಂಗ್!
ಹೈದರಾಬಾದ್, ಸೋಮವಾರ, 17 ಮೇ 2010( 18:06 IST )
PTI
ಗುಟ್ಕಾ ತಿನ್ನೋರಿಗೀಗ ಸಿಹಿಸುದ್ದಿ. ಈಗಿರುವುದಕ್ಕಿಂತಲೂ ಶೇ.76 ಎಕ್ಸ್‌ಟ್ರಾ ಸ್ಟ್ರಾಂಗ್ ಗುಟ್ಕಾ ಇನ್ನು ಲಭ್ಯ. ಇದು ಅಂತಿಂಥ ಗುಟ್ಕಾ ಅಂತೂ ಅಲ್ಲ. ಭರ್ಜರಿ ಸಾನಿಯಾ ಗುಟ್ಕಾ!
ಅರೆ, ಮೊನ್ನೆ ರಾತ್ರಿ ಬೆಳಗಾಗುವುದರೊಳಗೆ ಪಾಕಿಸ್ತಾನದ ಶೋಯೆಬ್‌ನನ್ನು ಮದುವೆಯಾಗಿ ಪಾಕಿಸ್ತಾನದ ಸೊಸೆಯಾದ ಸಾನಿಯಾಗೆ ಯಾಕೀಗ ಗುಟ್ಕಾ ಸಹವಾಸ ಅಂತೀರಾ? ನಿಮ್ಮ ವಾದವೇನೋ ಸರಿಯಾಗಿಯೇ ಇದೆ ಬಿಡಿ. ಆದರೆ, 'ಸಾನಿಯಾ ಭಾಭಿ ಗುಟ್ಕಾ, ಶೇ.76 ಸ್ಟ್ರಾಂಗ್' ಎಂಬ ತಲೆಬರಹಗಳೀಗ ಎಲ್ಲೆಡೆ ರಾರಾಜಿಸುತ್ತಿವೆ.
ಪಾಕಿಸ್ತಾನದ ಮಂದಿ, ಈ ಸಾನಿಯಾ ಭಾಭಿ ಗುಟ್ಕಾ ಹೊರಡಿಸಿದ್ದಂತೂ ಖಂಡಿತ ಅಲ್ಲ ಮಾರಾಯ್ರೆ. ಇದು ಯಾರೋ ಕಿಡಿಗೇಡಿಗಳ ಕೆಲಸ. ಇಂಟರ್ನೆಟ್ ಪೋಲಿಗಳ ಕಿತಾಪತಿ. ಕೆಲಸವೇ ಇಲ್ಲದ ಕೆಲವು ಪೋಲಿಗಳು ಇದೀಗ ಸಾನಿಯಾ ಭಾಬಿ ಗುಟ್ಕಾ, ಶೇ.76 ಎಕ್ಸ್‌ಟ್ರಾ ಸ್ಟ್ರಾಂಗ್ ಎಂಬ ಬರಹ ಹೊತ್ತ ಸೆಕ್ಸೀ ಸಾನಿಯಾಳ ಮುಖ ಹೊತ್ತ ಕವರ್ ಚಿತ್ರವನ್ನು ಇಮೇಲ್‌ಗಳಲ್ಲಿ ಹರಿಬಿಡುತ್ತಿದ್ದಾರೆ.
ಹಾಗಾಗಿ ನೀವು ಕಿರಾಣಿ ಅಂಗಡಿಗೆ ಹೋಗಿ ಹೆಚ್ಚಿನ ಕಿಕ್ ಪಡೆಯಲು ಸಾನಿಯಾ ಭಾಬಿ ಗುಟ್ಕಾ ಕೊಡಿ ಅಂತ ಕೇಳಿದರೆ ಪೆಚ್ಚಾಗುವುಗದು ಖಂಡಿತ. ಒಟ್ಟಾರೆ ಸಾನಿಯಾ ಮಾತ್ರ, ನಾನಂತೂ ಇಂಥ ಯಾವುದೇ ಗುಟ್ಕಾ ಕಂಪನಿಗಳ ಜತೆ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಇದೆಲ್ಲ ಕಿಡಿಗೇಡಿಗಳ ಕೃತ್ಯ ಎಂದು ಸಾನಿಯಾ ಕಿಡಿಕಿಡಿಯಾಗಿದ್ದಾರೆ.
ಸದ್ಯಕ್ಕಂತೂ ಸಾನಿಯಾ ವೈವಾಹಿಕ ಜೀವನವನ್ನು ಸಕತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾಳಂತೆ. ಅದಕ್ಕೇ ಇರಬೇಕು ಈ ಪಡ್ಡೆಗಳು ಇಂಟರ್ನೆಟ್ ಮೂಲಕ ಆಕೆಯನ್ನು ಕೆಣಕಿದ್ದು!