ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ನಕ್ಸಲ್ ಮಾರಣಹೋಮ: ಪೊಲೀಸರು ಸೇರಿ 40 ಬಲಿ (Maoists | Dantewada | Bhusaras | civilians | Chhattisgarh Police)
ಹಲವು ಪೊಲೀಸ್ ಅಧಿಕಾರಿಗಳು ಹಾಗೂ ನಾಗರಿಕರು ಪ್ರಯಾಣಿಸುತ್ತಿದ್ದ ಬಸ್‌ನ್ನು ಗುರಿಯಾಗಿರಿಸಿಕೊಂಡು ನಕ್ಸಲೀಯರು ಅಡಗಿಸಿಟ್ಟ ನೆಲಬಾಂಬ್ ಸ್ಫೋಟಿಸಿದ ಪರಿಣಾಮ ಅಂದಾಜು 40 ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ಚತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮತ್ತೆ ನಡೆಯುವ ಮೂಲಕ ನಕ್ಸಲೀಯರ ಅಟ್ಟಹಾಸ ಮುಂದುವರಿದಂತಾಗಿದೆ.
ದಾಂತೇವಾಡದಿಂದ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ 25 ಪೊಲೀಸರು ಹಾಗೂ ಪ್ರಯಾಣಿಕರಿದ್ದರು. ಈ ಸಂದರ್ಭದಲ್ಲಿ ಸುಖ್ಮಾ ಎಂಬಲ್ಲಿ ನಕ್ಸಲೀಯರು ಅಡಗಿಸಿಟ್ಟ ನೆಲ ಬಾಂಬ್ ಸ್ಫೋಟಿಸಿದ ಪರಿಣಾಮ 20 ಪೊಲೀಸರು ಹಾಗೂ ನಾಗರಿಕರು ಸೇರಿ 40 ಮಂದಿ ಬಲಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ 7ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಸ್ಪೆಷಲ್ ಪೊಲೀಸ್ ಆಫೀಸರ್ಸ್(ಎಪಿಓ)ಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಸ್‌ನಲ್ಲಿ ವಿಶೇಷ ಪೊಲೀಸ್ ಪಡೆಯ ಅಧಿಕಾರಿಗಳು ಇದ್ದಿರುವುದನ್ನು ರಾಜ್ಯ ಗೃಹ ಸಚಿವ ನಾನ್‌ಕಿ ರಾಮ್ ಕನ್ವರ್ ಖಚಿತಪಡಿಸಿದ್ದಾರೆ. ಆದರೆ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬುದು ತಿಳಿದಿಲ್ಲ.
ಕಳೆದ ತಿಂಗಳಷ್ಟೇ ಮಾವೋವಾದಿಗಳು ದಾಂತೇವಾಡದಲ್ಲಿ ದಾಳಿ ನಡೆಸಿ 76 ಮಂದಿ ಸಿಆರ್‌ಪಿಎಫ್ ಸಿಬ್ಬಂದಿಗಳ ಮಾರಣ ಹೋಮ ನಡೆಸಿದ ಬೆನ್ನಲ್ಲೇ ಈ ದುಷ್ಕತ್ಯ ನಡೆಸಿದ್ದಾರೆ.