ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್‌‍ನಲ್ಲಿ ಮುಸ್ಲಿಂರಿಗೆ ಸಮಾನ ಆದ್ಯತೆ:ಅಡ್ವಾಣಿ (Muslims| Gujarat| LK Advani)
Bookmark and Share Feedback Print
 
PTI
ಗುಜರಾತ್‌ ರಾಜ್ಯದಲ್ಲಿ ಮುಸ್ಲಿಂರ ಏಳಿಗೆಯನ್ನು,ಇತರ ಸಮದುದಾಯಗಳಿಗೆ ಹೋಲಿಸಿದಲ್ಲಿ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಸಮನಾದ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಮುಖ್ಯಮಂತ್ರಿ ಮೋದಿಯವರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಗುಜರಾತ್‌ನಲ್ಲಿರುವ ಮುಸ್ಲಿಂರು ಶೇ.73.5ರಷ್ಟು ಸಾಕ್ಷರತೆ ಪ್ರಮಾಣವನ್ನು ಹೊಂದಿದ್ದು, ದೇಶದ ಸರಾಸರಿ ಸಾಕ್ಷರತೆ ಶೇ.59.1ರಷ್ಟಿದೆ.ನಗರಗಳಲ್ಲಿ ಶೇ.76ರಷ್ಟು ಮುಸ್ಲಿಂರು ಸಾಕ್ಷರರಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಶೇ.81ರಷ್ಟು ಸಾಕ್ಷರತೆಯನ್ನು ಹೊಂದಿದ್ದಾರೆ ಎಂದು ಅಡ್ವಾಣಿ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರ ಸರಾಸರಿ ಸಾಕ್ಷರತೆ,ರಾಷ್ಟ್ರೀಯ ಸರಾಸರಿಗಿಂತ ಶೇ.5ರಷ್ಟು ಹೆಚ್ಚಳವಾಗಿದೆ. ಗ್ರಾಮೀಣ ಭಾಗಗಳಲ್ಲಿ ಮುಸ್ಲಿಂ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.57ರಷ್ಟಿದ್ದು,ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಮುಸ್ಲಿಂರ ತಲಾ ಮಾಸಿಕ ಆದಾಯ ಪಟ್ಟಣ ಪ್ರದೇಶಗಳಲ್ಲಿ 875 ರೂಪಾಯಿಗಳಾಗಿದ್ದು, ರಾಷ್ಟ್ರೀಯ ತಲಾ ಆದಾಯ ಸರಾಸರಿ 804 ರೂಪಾಯಿಗಳಾಗಿವೆ. ಉತ್ತರಪ್ರದೇಶ (748ರೂ) ಪಶ್ಚಿಮ ಬಂಗಾಳ(811ರೂ) ಪಂಜಾಬ್ (803ರೂ)ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತಲಾ ಆದಾಯ (837ರೂ)ಗಳಾಗಿವೆ ಎಂದು ಅಡ್ವಾಣಿ ವಿವರಣೆ ನೀಡಿದ್ದಾರೆ.

ಪಶ್ಚಿಮ ಬಂಗಾಳ(2.1), ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ (4.4) ರಷ್ಟು ಮುಸ್ಲಿಂರು ಸರಕಾರಿ ಉದ್ಯೋಗದಲ್ಲಿದ್ದು, ಗುಜರಾತ್‌‌ ಸರಕಾರದಲ್ಲಿ ಇತರ ರಾಜ್ಯಗಳಿಗಿಂತ ಅಧಿಕ (ಶೇ.5.4ರಷ್ಟು) ಮುಸ್ಲಿಂರು ಸರಕಾರಿ ನೌಕರರಾಗಿದ್ದಾರೆ ಎಂದು ಮೋದಿ ಅಡಳಿತದ ಕಾರ್ಯವೈಖರಿಯನ್ನು ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಶ್ಲಾಘಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ