ಅಂತೂ ಕೊನೆಗೂ ಜೆಎಂಎಂ ಮತ್ತು ಭಾರತೀಯ ಜನತಾ ಪಕ್ಷ ಜಾರ್ಖಂಡ್ ಸರ್ಕಾರ ರಚನೆಗೆ ಮಂಗಳವಾರ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ಮುಂದಿನ 28 ತಿಂಗಳು ಕಾಲ ಬಿಜೆಪಿಯ ಅರ್ಜುನ್ ಮುಂಡಾ ಮುಖ್ಯಮಂತ್ರಿ ಗದ್ದುಗೆ ಏರಲು ಹಾದಿ ಸುಗಮವಾಗಲಿದೆ.
ರೋಟೇಶನ್(ನಿರ್ದಿಷ್ಟ ಅವಧಿಯವರೆಗೆ) ಆಧಾರದಲ್ಲಿ ಬಿಜೆಪಿ ಮತ್ತು ಜೆಎಂಎಂ ಅಧಿಕಾರವನ್ನು ಹಂಚಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಜೆಎಂಎಂ ವರಿಷ್ಠ ಶಿಬು ಸೊರೆನ್ ಬೆಂಬಲ ನೀಡುವ ಮೂಲಕ ಹಲವು ದಿನಗಳ ರಾಜಕೀಯ ಬಿಕ್ಕಟ್ಟು ಶಮನವಾದಂತಾಗಿದೆ.
ಆ ನಿಟ್ಟಿನಲ್ಲಿ ಮೊದಲ 28 ತಿಂಗಳ ಕಾಲ ಬಿಜೆಪಿಯ ಅರ್ಜುನ್ ಮುಂಡಾ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ನಂತರದ 28ತಿಂಗಳ ಕಾಲ ಜೆಎಂಎಂನ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶಿಬು ಸೊರೆನ್ ಅವರು ಮೇ 25ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ನಂತರ ಬಿಜೆಪಿಯ ಅರ್ಜುನ್ ಮುಂಡಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.