ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಕೆಲವೇ ಗಂಟೆಗಳಲ್ಲಿ ತೀವ್ರ ಬಿರುಗಾಳಿ ಸಮೇತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದಿದ್ದು ಲೈಲಾ ಚಂಡಮಾರುತ ಅಪ್ಪಳಿಸುವ ಸಂಭವವಿದೆ. ಚೆನ್ನೈ ಸೇರಿದಂತೆ ಆಂಧ್ರ ಹಾಗೂ ತಮಿಳುನಾಡು ತೀರದ 700 ಕಿಮೀ ವಿಸ್ತಾರದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ.
ಗಂಟೆಗೆ 65ರಿಂದ 75 ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸಲಿದ್ದು, ಮೀನುಗಾರರು ಇಂಥಾ ಸಮಯದಲ್ಲಿ ನೀರಿಗಿಳಿಯದಿರುವಂತೆ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅಂಡಮಾನ್ ನಿಕೋಬಾರ್ ದ್ವೀಪ ಸಮೂಹವೂ ಸೇರಿದಂತೆ ಪೂರವ ಕರಾವಳಿ ತೀರದಲ್ಲಿ ಭಾರೀ ಮಳೆಯಾಗಲಿದೆ. ಕಳೆದ ವರ್ಷವೂ ಇದೇ ಸಮಯದಲ್ಲಿ ಐಲಾ ಎಂಬ ಚಂಡಮಾರುತ ಅಪ್ಪಳಿಸಿದ್ದು, ಇದು ವಾತಾವರಣದ ಹೆಚ್ಚಿನ ಆದ್ರತೆಯನ್ನು ತನ್ನ ಜೊತೆ ಹೊತ್ತೊಯ್ದು ಮಳೆಯ್ನನು ಇನ್ನೂ ತಡವಾಗಿಸಿತ್ತು. ಇದರಿಂದ ಒರಿಸ್ಸಾ ಹಾಗೂ ಪಶ್ಚಿಮ ಬಂಗಳಾದಲ್ಲಿ ಸಕಾಲದಲ್ಲಿ ಮಳೆ ಬಾರದೆ ತತ್ತರಿಸಿದ್ದರು.