ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾವೇದ್-ಸಲೀಂ ನಿಜವಾದ ಮುಸ್ಲಿಮರು: ಶಿವಸೇನೆ (Shiv Sena | Deoband | Javed Akhtar | Salim | fatwa)
Bookmark and Share Feedback Print
 
ಮುಸ್ಲಿಮ್ ಮಹಿಳೆಯರು ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಮ್ ಧರ್ಮಕ್ಕೆ ವಿರುದ್ಧದವಾದದ್ದು ಎಂದು ದಿಯೋಬಂದ್ ಹೊರಡಿಸಿದ್ದ ಫತ್ವಾ ಬಗ್ಗೆ ಟೀಕಾಪ್ರಹಾರ ನಡೆಸಿದ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್‌ಗೆ ಕೊಲೆ ಬೆದರಿಕೆ ಬಂದ ಬೆನ್ನಲ್ಲೇ, ಶಿವಸೇನೆ ಇದೀಗ ಅಖ್ತರ್ ಬೆಂಬಲಕ್ಕೆ ನಿಂತಿದೆ.

'ಇವರು ನಿಜವಾದ ಮುಸ್ಲಿಮರು' ಎಂಬ ತಲೆಬರಹದಡಿಯಲ್ಲಿ ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಜಾವೇದ್ ಅಖ್ತರ್ ಮತ್ತು ಅವರ ಒಂದು ಕಾಲದ ಆಪ್ತ, ಸ್ಕ್ರಿಪ್ಟ್ ರೈಟರ್ ಸಲೀಮ್ ಅವರನ್ನು ಹೊಗಳಿ, ಶಹಬ್ಬಾಸ್‌ಗಿರಿ ನೀಡಲಾಗಿದೆ.

ತನ್ನದೇ ಸಮಾದ ಮೂಲಭೂತವಾದಿಗಳ ಫತ್ವಾಕ್ಕೆ ಜಾವೇದ್ ಅಖ್ತರ್ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೇ ಮುಸ್ಲಿಮ್ ಮಹಿಳೆಯರ ಭಾವನೆಗಳನ್ನು ಅವರು ಗೌರವಿಸಿದ್ದಾರೆ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.

ಆ ನಿಟ್ಟಿನಲ್ಲಿ ಮುಸ್ಲಿಮ್ ಧರ್ಮಾಂಧರ ವಿರುದ್ಧ ಸಲೀಂ ಮತ್ತು ಜಾವೇದ್ ಅಖ್ತರ್ ಯಾವಾಗಲೂ ವಿರೋಧದ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ವಿರೋಧದ ಧ್ವನಿ ಎತ್ತುತ್ತಿರುವ ಅವರಿಬ್ಬರಿಗೂ ನಾವು ಶುಭ ಹಾರೈಸುತ್ತೇವೆ. ಅಲ್ಲದೇ ಸಂಪಾದಕೀಯದಲ್ಲಿ, ಸಲೀಂ ಹಾಗೂ ಅವರ ಕುಟುಂಬ ಕೂಡ ಪೂರ್ಣ ಪ್ರಮಾಣದಲ್ಲಿ ಜಾತ್ಯತೀತರಾಗಿದ್ದಾರೆ. ಈ ಹಿಂದೆಯೂ ವಂದೇ ಮಾತರಂ ಹಾಡುವ ಬಗ್ಗೆಯೂ ಮುಸ್ಲಿಮ್ ಧರ್ಮಗುರುಗಳು ಫತ್ವಾ ಹೊರಡಿಸಿರುವುದನ್ನು ಸ್ಮರಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಮುಸ್ಲಿಮ್ ಮಹಿಳೆಯರು ವಿದ್ಯಾಭ್ಯಾಸ ಪಡೆಯುವ ಅಥವಾ ಕೆಲಸ ಮಾಡಬಹುದು ಎಂಬುದನ್ನು ಊಹಿಸಲು ಸಾಧ್ಯವೇ ಪ್ರಶ್ನಿಸಿದ್ದು, ಆ ನೆಲೆಯಲ್ಲಿ ಸಲೀಂ-ಜಾವೇದ್‌ರಂತಹ ಪ್ರಗತಿಪರ ವ್ಯಕ್ತಿಗಳು ಮಾತ್ರ ಮುಸ್ಲಿಮರನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಜಿಹಾದ್‌ನಿಂದ ದೇಶಪ್ರೇಮದೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಹೊಂದಿದ್ದಾರೆ ಎಂದು ಸಾಮ್ನಾದಲ್ಲಿ ಹೇಳಿದೆ.

ಮುಸ್ಲಿಮ್ ಮಹಿಳೆಯರು ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ ಸಿದ್ದಾಂತಕ್ಕೆ ವಿರುದ್ಧ ಎಂದು ಫತ್ವಾ ಹೊರಡಿಸಿರುವ ಇಸ್ಲಾಮ್‌ನ ಮೌಲ್ವಿಗಳು ಮತಿವಿಕಲರು ಎಂದು ಚಾನೆಲ್‌ವೊಂದರ ಚರ್ಚೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರನ್ನು ಕೊಲ್ಲುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಒಡ್ಡಲಾಗಿತ್ತು.

ದಿಯೋಬಂದ್ ಹೊರಡಿಸಿದ್ದ ಫತ್ವಾ ಕುರಿತಂತೆ ಟಿವಿ ಚಾನೆಲ್‌ವೊಂದರ ಚರ್ಚೆಯಲ್ಲಿ ಜಾವೇದ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಈ ರೀತಿಯ ಫತ್ವಾ ಹೊರಡಿಸುವ ಮುಸ್ಲಿಮ್ ಧರ್ಮಗುರುಗಳು ಮತಿಗೆಟ್ಟವರು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿಯೇ ಅಖ್ತರ್ ವಿರುದ್ಧ ಕೊಲೆ ಬೆದರಿಕೆಯ ಇ-ಮೇಲ್ ಸಂದೇಶ ರವಾನಿಸಲಾಗಿತ್ತು. ಫತ್ವಾ ವಿರುದ್ಧ ಹೇಳಿಕೆ ನೀಡಿದ ಅಖ್ತರ್ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಇ-ಮೇಲ್ ಸಂದೇಶದಲ್ಲಿ ಎಚ್ಚರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ