ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾವತಿ ಪ್ರತಿಮೆಯ ಬದಲಿಗೆ ಶೀರಾಮನ ಪ್ರತಿಮೆ:ವರುಣ್ (Varun Gandhi | BJP | Lord Ram | Mayawati)
Bookmark and Share Feedback Print
 
PTI
ಉತ್ತರಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಮಾಯಾವತಿಯವರ ಪ್ರತಿಮೆಗಳನ್ನು ಕಿತ್ತುಹಾಕಿ ಶ್ರೀರಾಮದೇವರ ಮೂರ್ತಿಗಳನ್ನು ಅನಾವರಣಗೊಳಿಸಲಾಗುವುದು ಎಂದು ಬಿಜೆಪಿ ನಾಯಕ ವರುಣ್ ಗಾಂಧಿ ಹೇಳಿದ್ದಾರೆ.

ರಾಜ್ಯದ ಬಿಜೆಪಿ ಅದ್ಯಕ್ಷ ಸೂರ್ಯ ಪ್ರತಾಪ್ ಶಾಹಿ ಅವರ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಯಾವತಿಯವರ ಪ್ರತಿಮೆಗಳನ್ನು ತೆಗೆದುಹಾಕಿ ಶೀರಾಮ ದೇವರ ಮೂರ್ತಿಗಳನ್ನು ಸ್ಥಾಪಿಸಲಾಗುವುದು ಎಂದು ಫಿಲಿಭಿತ್ ಸಂಸತ್ ಸದಸ್ಯ ಹಾಗೂ ಬಿಜೆಪಿ ನಾಯಕ ವರುಣ್ ಗಾಂಧಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾದ ಸ್ವಾಗತ ಸಮಾರಂಭದಲ್ಲಿ ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷ ಸೂರ್ಯ ಪ್ರತಾಪ್ ಶಾಹಿ, ರಾಜ್ಯದಲ್ಲಿ ಪಕ್ಷ ಅದಿಕಾರಕ್ಕೆ ತರುವ ನಿಟ್ಟಿನಲ್ಲಿ ನೂತನ ಮಾರ್ಗದರ್ಶನಗಳನ್ನು ನೀಡಲಿದ್ದಾರೆ ಎಂದರು.

ಏತನ್ಮಧ್ಯೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಪವಿತ್ರಸ್ಥಳದಲ್ಲಿ ರಾಮನ ಮೂರ್ತಿಯನ್ನು ಸ್ಥಾಪಿಸಲಾಗುವುದು.ಸುಂದರವಾದ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಪಕ್ಷ ಸದಾ ಬದ್ಧ ಎಂದು ಪಕ್ಷದ ಉಪಾಧ್ಯಕ್ಷ ವಿನಯ್ ಕಟಿಯಾರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ