ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಮೋದಿ: ಸಮೀಕ್ಷೆ (Best Chief Minister | Gujarat | Narendra Modi | Patnaik | UPA | Congress | BJP)
Bookmark and Share Feedback Print
 
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಭಾರತದಲ್ಲಿ ಅತ್ಯುತ್ತಮವಾಗಿ ಕಾರ್ಯಭಾರ ನಡೆಸುತ್ತಿರುವ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಎನ್‌ಡಿಟಿವಿ-ಜಿಎಫ್‌ಕೆ ನಡೆಸಿದ ಜನಮತ ಸಮೀಕ್ಷೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ.

ಯುಪಿಎ ಸರಕಾರದ ಎರಡನೇ ಅವಧಿಯ ಮೊದಲ ವಾರ್ಷಿಕೋತ್ಸವ ಪ್ರಯುಕ್ತ ನಡೆಸಲಾಗಿದ್ದ ಈ ಸಮೀಕ್ಷೆಯಲ್ಲಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ಗೆ ದ್ವಿತೀಯ ಸ್ಥಾನ ದೊರೆತಿದೆ. ಅವರಿಗೆ ಮತ್ತು ಮೋದಿ ನಡುವಿನ ಅಂತರ ಕೇವಲ ಶೇ.1 ಮಾತ್ರ. ಆದರೂ ದೇಶದ ಎರಡನೇ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದು.

ರಾಜಕೀಯ ವಿರೋಧಿಗಳು, ಬುದ್ಧಿಜೀವಿಗಳ ಬಾಯಲ್ಲಿ ಅತೀ ಹೆಚ್ಚು ಟೀಕೆಗೆ, ರಾಜಕೀಯ ಪ್ರೇರಿತ ಖಂಡನೆಗೆ ಗುರಿಯಾದವರು ನರೇಂದ್ರ ಮೋದಿ. ಆದರೂ ಅವರು ಗುಜರಾತ್ ಜನರ ಮನಸ್ಸಿನಲ್ಲಿ ಮತ್ತು ಬಿಜೆಪಿಯೊಳಗೆ ಅತ್ಯಂತ ಜನಪ್ರಿಯರಾಗಿರುವುದು ಈ ಸಮೀಕ್ಷೆಯಿಂದ ಹೊರಬಿದ್ದಿರುವ ಅಂಶ.

ಗುಜರಾತಿಗಳು ನರೇಂದ್ರ ಮೋದಿಯನ್ನು ತಮ್ಮ ಹೀರೋ ಮತ್ತು ತಮ್ಮ ಸಂರಕ್ಷಕ ಎಂಬ ಭಾವನೆಯಲ್ಲಿ ನೋಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿಯನ್ನು ಕೆಳಗಿಳಿಸಲು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮಾಡುತ್ತಿರುವ ಯಾವುದೇ ತಂತ್ರವೂ ಫಲಿಸುತ್ತಿಲ್ಲ.

ವಿಶೇಷವೆಂದರೆ, ಸಮೀಕ್ಷೆಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳೇ ತಮ್ಮ ಛಾಪು ಮೂಡಿಸಿದ್ದಾರೆ. ಅಂದರೆ ಮೊದಲ ಐದು ಸ್ಥಾನಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಪಾಲು 3. ನವೀನ್ ಪಟ್ನಾಯಕ್ ಅವರು ಬಿಜೆಡಿ (ಬಿಜು ಜನತಾ ದಳ)ಯವರು. ಉಳಿದಂತೆ ಅಸ್ಸಾಂ ಮುಖ್ಯಮಂತ್ರಿ, ಕಾಂಗ್ರೆಸ್‌ನ ತರುಣ್ ಗೊಗೊಯ್ ಅವರು ಕೂಡ ಟೈಪ್-5 ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ನ ಹೆಮ್ಮೆಗೆ ಕಾರಣರಾಗಿದ್ದಾರೆ.

ಎನ್‌ಡಿಟಿವಿ ಸಮೀಕ್ಷೆಯ ಪ್ರಕಾರ ಭಾರತದ ಟಾಪ್-5 ಮುಖ್ಯಮಂತ್ರಿಗಳು:
1. ನರೇಂದ್ರ ಮೋದಿ (ಗುಜರಾತ್) - ಶೇ.85 ಮತಗಳು
2. ನವೀನ್ ಪಟ್ನಾಯಕ್ (ಒರಿಸ್ಸಾ) - ಶೇ.84 ಮತಗಳು
3. ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ) - ಶೇ. 77 ಮತಗಳು
4. ತರುಣ್ ಗೊಗೊಯ್ (ಅಸ್ಸಾಂ) - ಶೇ.76 ಮತಗಳು
5. ಡಾ.ರಮಣ್ ಸಿಂಗ್ (ಛತ್ತೀಸಗಢ) - ಶೇ. 73 ಮತಗಳು

ದೇಶಾದ್ಯಂತ ನಡೆಸಲಾಗಿದ್ದ ಸಮೀಕ್ಷೆಯಲ್ಲಿ 34,277 ಮಂದಿ ಭಾಗವಹಿಸಿ ತಮ್ಮ ಅಭಿಮತ ಹೊರಹಾಕಿದ್ದರು.

ಇದೇ ಸಮೀಕ್ಷೆಯಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಹೊರಬಿದ್ದಿದ್ದು, ಯುಪಿಎ ಎರಡನೇ ಅವಧಿಯ ಆಡಳಿತವು ತೀರಾ ಹೀನಾಯ ಪರಿಸ್ಥಿತಿಗೆ ತಮ್ಮನ್ನು ತಳ್ಳಿದೆ ಎಂದು ಶೇ.44 ಮಂದಿ ಹೇಳಿಕೊಂಡಿದ್ದಾರೆ. ಆದರೆ ಶೇ.70ರಷ್ಟು ಮಂದಿ, ಪ್ರಧಾನಿಯಾಗಿ ಮನಮೋಹನ್ ಸಿಂಗ್ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೇ.55 ಮಂದಿ, ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬೇಕೆಂದು ಬಯಸಿದ್ದರೆ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪ್ರಧಾನಿಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿದ್ದಾರೆ ಎಂದು ಶೇ.63 ಮಂದಿ ಹೇಳಿದ್ದಾರೆ.

ನಕ್ಸಲ್ ಹಿಂಸಾಚಾರ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳಿಂದಾಗಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಗೃಹ ಸಚಿವ ಪಿ.ಚಿದಂಬರಂ ಅವರ ಕಾರ್ಯನಿರ್ವಹಣೆಗೆ ಶೇ. 61 ಮತಗಳು ದೊರೆತಿವೆ. ಶೇ.59 ಮಂದಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಕಾರ್ಯನಿರ್ವಹಣೆಯನ್ನು ಕೊಂಡಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ