ಮುಖ್ಯಮಂತ್ರಿ ಶಿಬುಸೋರೆನ್ ರಾಜೀನಾಮೆ ನೀಡಲು ನಿರಾಕರಿಸಿದ್ದು, 28 ತಿಂಗಳ ನಂತರ ಅಧಿಕಾರ ಹಸ್ತಾಂತರಕ್ಕೆಬಿಜೆಪಿ ಜೊತೆ ಒಪ್ಪಿಕೊಂಡಿದ್ದ ಕರಾರು ಸೂತ್ರಕ್ಕೆ ಸಮ್ಮತಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖ್ಯಸ್ಥ ಸೋರೆನ್ ಬೋಕಾರೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಅಧಿಕಾರ ಹಸ್ತಾಂತರ ಸೂತ್ರಕ್ಕೆ ತಮಗೆ ಒಪ್ಪಿಗೆಯಿಲ್ಲವಾದ್ದರಿಂದ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.
ಏತನ್ಮದ್ಯೆ, ಸೋರೆನ್ ತಾವು ವಿಧಾನಸಭೆಯಲ್ಲಿ ಸ್ಪರ್ಧಿಸುವ ಕ್ಷೇತ್ರದ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.ಸಂಸತ್ ಸದಸ್ಯ ಸೋರೆನ್, ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಬೇಕಾದಲ್ಲಿ ಜೂನ್ 30ರೊಳಗೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಬೇಕಾಗುತ್ತದೆ.
ಸೋರೆನ್ ಹೇಳಿಕೆಯಿಂದಾಗಿ, ಪಾಲುದಾರ ಪಕ್ಷವಾದ ಬಿಜೆಪಿ ವರಿಷ್ಛ ಮಂಡಳಿಗೆ ಮತ್ತೆ ತಲೆನೋವಾಗಿ ಪರಿಣಮಿಸಿದ್ದು, ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಮಂಗಳವಾರದಂದು ಬಿಜಿಪಿ ಮತ್ತು ಜೆಎಂಎಂ ಪಕ್ಷಗಳು ತಲಾ 28 ತಿಂಗಳಂತೆ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿಸಿದ್ದವು.ಜಂಟಿ ಸುದ್ದಿಗೋಷ್ಠಿ ನಡೆಸಿದ ಸೋರೆನ್ ಮತ್ತು ಬಿಜೆಪಿ ಪ್ರದಾನ ಕಾರ್ಯದರ್ಶಿ ಅರ್ಜುನ್ ಮುಂಡಾ, ಅಧಿಕಾರ ಹಂಚಿಕೆ ಸೂತ್ರವನ್ನು ಬಹಿರಂಗಪಡಿಸಿದ್ದರು.