ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಟ್ ಆಂಡ್ ರನ್:ನಟ ಸಲ್ಮಾನ್ ಕುಡಿದ ಮತ್ತಿನಲ್ಲಿದ್ದ (Salman Khan | car | Hit and run)
Bookmark and Share Feedback Print
 
ನಗರದ ಬಾಂದ್ರಾ ಪ್ರದೇಶದಲ್ಲಿ 2002ರಲ್ಲಿ ನಡೆದ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ,ರಕ್ತದ ಪರೀಕ್ಷೆಯನ್ನು ನಡೆಸಿದ ತಜ್ಞರು, ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿ, ಕಾರು ಚಾಲನೆ ಮಾಡುತ್ತಿದ್ದ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿದ್ದರು ಎಂದು ಹೇಳಿದ್ದಾರೆ.

ಮಧ್ಯರಾತ್ರಿ ಸುಮಾರಿಗೆ ಬಾಂದ್ರಾದಲ್ಲಿರುವ ಬೇಕರಿಯೊಳಗೆ ನಟ ಸಲ್ಮಾನ್ ಖಾನ್, ಮನಬಂದಂತೆ ಕಾರು ನುಗ್ಗಿಸಿ, ಒಬ್ಬನ ಸಾವಿಗೆ ಕಾರಣವಾಗಿ, ನಾಲ್ಕು ಮಂದಿ ಗಾಯಗೊಂಡಿದ್ದರು.

ಹಿಟ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು 2002 ಸೆಪ್ಟೆಂಬರ್ 28 ರಂದು ಬಂಧಿಸಲಾಗಿತ್ತು.

ಅವರನ್ನು ಬಂಧಿಸಿದ ನಂತರ ರಕ್ತದ ಸ್ಯಾಂಪಲ್‌ನ್ನು ತಜ್ಞರಿಗೆ ಕಳುಹಿಸಿಕೊಡಲಾಗಿತ್ತು. ರಕ್ತದ ಪರಿಶೀಲನೆಯನ್ನು ನಡೆಸಿದ ತಜ್ಞರು, ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿ, ಅಪಘಾತ ಸಂಭವಿಸಿದ ವೇಳೆ ಸಲ್ಮಾನ್ ಕುಡಿದ ಮತ್ತಿನಲ್ಲಿರುವುದು ದೃಢವಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ