ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಘು ಯುದ್ಧ ಹೆಲಿಕಾಪ್ಟರ್; ಅಮೆರಿಕಾ ಸಾಲಿಗೆ ಭಾರತ (India | America | Russia | light combat helicopter)
Bookmark and Share Feedback Print
 
ಸಂಪೂರ್ಣವಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಿ ನಿರ್ಮಿಸಿರುವ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಬೆಂಗಳೂರಿನ ಬಾನಂಗಣದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸುವ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಸಿದೆ.

ಆ ಮೂಲಕ ಭಾರತದ ವಾಯು ಪಡೆಗೆ ಮತ್ತಷ್ಟು ಬಲ ದೊರಕಿದಂತಾಗಿದೆ. ಭಾರತವು ಇದೀಗ ಎಲ್‌ಸಿಎಚ್ ಲಘು ಯುದ್ಧ ಹೆಲಿಕಾಪ್ಟರ್ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿವೆ.

ಭಾರತ ಇದೀಗ ಎಲ್‌ಸಿಎಚ್ ಲಘು ಯುದ್ಧ ವಿಮಾನ ಹೊಂದಿರುವ ಅಮೆರಿಕಾ, ರಷ್ಯಾ, ಚೀನಾ, ಇಟೆಲಿ ಮತ್ತು ದಕ್ಷಿಣ ಆಫ್ರಿಕಾ ಸಾಲಿಗೆ ಸೇರಿದೆ.

ಎಲ್‌ಸಿಎಚ್ ಮೊದಲ ಪರೀಕ್ಷಾ ಹಾರಾಟವನ್ನು ಪೈಲಟ್ ಉನ್ನಿ ಪಿಳ್ಳೈ ನೆರವೇರಿಸುವ ಮೂಲಕ ಈ ಲಘು ಹೆಲಿಕಾಪ್ಟರ್‌ನ ಸಾಮರ್ಥ್ಯ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಉತ್ಪಾದನೆ ಕಾರ್ಯದರ್ಶಿ ಆರ್.ಕೆ.ಸಿಂಗ್, ವೈಮಾನಿಕ ಜಂಟಿ ಕಾರ್ಯದರ್ಶಿ ಮನೋಜ್ ಸೌನಿಕ್ ಮತ್ತು ಏರ್ ಮಾರ್ಷಲ್ ಪಿ.ಕೆ. ಬಾರ್ಬೋರಾ ಉಪಸ್ಥಿತರಿದ್ದರು.

ಈ ನೂತನ ಶಸ್ತ್ರಶಜ್ಜಿತವಾದ ಹೆಲಿಕಾಪ್ಟರ್‌ನಿಂದ ಎದುರಾಳಿಗಳ ಮೇಲೆ ದಾಳಿ ನಡೆಸಲು ಹಾಗೂ ವೈರಿಗಳ ದಾಳಿಯನ್ನು ವಿಫಲಗೊಳಿಸಲು ಬಳಸಬಹುದಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ