ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಟ್ಟು ಕರಕಲಾದ ಶವದ ಗುರುತು ಪತ್ತೆಗೆ ಗೋಳಾಟ (Air India Express | DNA | forensic team | Mangalore | families.)
Bookmark and Share Feedback Print
 
ಬಜ್ಪೆ ವಿಮಾನ ನಿಲ್ದಾಣ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತ ಸಂಭವಿಸಿ ಈಗಾಗಲೇ ಎರಡು ದಿನ ಕಳೆದಿದೆ. ಆದರೆ ಮನೆಯವರ ಗೋಳಾಟ, ಪರದಾಟ ಇನ್ನೂ ನಿಂತಿಲ್ಲ. ಸುಟ್ಟು ಕರಕಲಾಗಿ ಹೋಗಿರುವ ಮೂರು ಮೃತದೇಹಗಳಿಗಾಗಿ ಕೆಲವು ಮನೆಯವರು ತಕರಾರು ತೆಗೆಯುವ ಮೂಲಕ ಮೃತನ ನಿಜವಾದ ಗುರುತು ಪತ್ತೆ ಹಚ್ಚುವುದು ಸಮಸ್ಯೆಗೆ ಎಡೆಮಾಡಿಕೊಟ್ಟಿದ್ದರೆ, ಹಲವು ಮೃತದೇಹಗಳ ಗುರುತು ಪತ್ತೆಗಾಗಿ ಕುಟುಂಬಿಕರು ಪರದಾಡುವ ಸ್ಥಿತಿ ಬಂದೊದಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕರಟಿದ ಶವದ ಗುರುತು ಪತ್ತೆಗೆ ಪರದಾಟ: ಶನಿವಾರ ದುರಂತ ಸಂಭವಿಸಿದ ನಂತರ ಸ್ಥಳೀಯರು, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಕಮಾಂಡೋ ಪಡೆಗಳು ನಿರಂತರ ಕಾರ್ಯಾಚರಣೆ ನಂತರ ಸುಮಾರು 158 ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ 136 ಮೃತದೇಹಗಳನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ. ಆದರೆ ಅದರಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಮೂರು ಮೃತದೇಹಗಳ ಗುರುತು ಪತ್ತೆ ಹಚ್ಚುವುದು ಕಠಿಣವಾಗಿರುವ ಹಿನ್ನೆಲೆಯಲ್ಲಿ ಅದು ಯಾರ ಶವ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ ಕೆಲವು ಕುಟುಂಬಗಳು ಅದು ನಮ್ಮ ಕುಟುಂಬದ ಸದಸ್ಯನ ಮೃತದೇಹ ಎಂದು ಹೇಳುತ್ತಿರುವುದು ವೈದ್ಯರಿಗೆ ಗೊಂದಲಕ್ಕೆ ಎಡಮಾಡಿಕೊಟ್ಟಿದೆ.

22 ಶವಗಳ ಗುರುತು ಪತ್ತೆಯಾಗಿಲ್ಲ: ಇದೀಗ ಸುಮಾರು 22 ಮೃತದೇಹಗಳ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿರುವ ಕಾರಣ ಹೈದರಾಬಾದ್‌ನಿಂದ ಫೋರೆನ್ಸಿಕ್ ತಂಡ ಆಗಮಿಸಿದ್ದು,ಕುಟುಂಬಿಕರ ರಕ್ತದ ಮಾದರಿ ಪಡೆದು ಡಿಎನ್ಎ ಪರೀಕ್ಷೆ ನಡೆಸುತ್ತಿದ್ದಾರೆ. ಅಲ್ಲದೇ ಶವಗಳ ಗುರುತು ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಸೋಮವಾರ ಸಂಜೆಯೊಳಗೆ ಉಳಿದ 22 ಮೃತದೇಹಗಳ ಗುರುತು ಪತ್ತೆ ಹಚ್ಚುವ ಸಾಧ್ಯತೆ ಇರುವುದಾಗಿ ಹೇಳಿದೆ. ಸುಟ್ಟು ಕರಕಲಾಗಿರುವ ಮೃತದೇಹಗಳ ಪರಿಚಯ ಕಂಡು ಹಿಡಿಯಲು ಕುಟುಂಬದ ಸದಸ್ಯರ ನೆರವಿನೊಂದಿಗೆ ವೈದ್ಯರು ಕಾರ್ಯಪ್ರವೃತ್ತರಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಗುರುತು ಪತ್ತೆಗೆ ಇನ್ನೂ ಹತ್ತು ದಿನ?: ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ಮನೆಯವರಿಗೂ ಶವದ ಗುರುತು ಪತ್ತೆ ಕಷ್ಟವಾಗಿದೆ. ಹಾಗಾಗಿ ಡಿಎನ್ಎ ಫಲಿತಾಂಶಕ್ಕಾಗಿ ಕುಟುಂಬದ ಸದಸ್ಯರು ಕಾಯುತ್ತಿದ್ದಾರೆ. ಆದರೆ ದೊಡ್ಡ ಸಮಸ್ಯೆಯಾಗಿರುವುದು ಡಿಎನ್ಎ ಪರೀಕ್ಷೆಯ ಫಲಿತಾಂಶ ಬರಲು ಇನ್ನೂ 7 ರಿಂದ 10 ದಿನಗಳ ಕಾಲ ಕಾಯಬೇಕಾಗಿದೆ. ಕುಟುಂಬ ವರ್ಗದವರಿಗೆ ಒಂದೆಡೆ ಶೋಕ, ಮತ್ತೊಂದೆಡೆ ಶವದ ಗುರುತು ಪತ್ತೆ ತಡವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಅಯ್ಯೋ ಗುರುತು ಪತ್ತೆ ಹಚ್ಚಲು ಬಿಡುತ್ತಿಲ್ಲ: ಕರಟಿ ಹೋದ ಶವಗಳಿಗೆ ಅಂಟಿದ ಬೂಟ್ಸ್, ವಾಚ್ ನೋಡಲು ಬಿಡುತ್ತಿಲ್ಲ, ಹಾಗಾಗಿ ಸುಲಭವಾಗಿ ಶವದ ಗುರುತು ಪತ್ತೆ ಹಚ್ಚುವ ಕಾರ್ಯಕ್ಕೂ ಶವಾಗಾರದ ಸಿಬ್ಬಂದಿಗಳು, ವೈದ್ಯರು ಅವಕಾಶ ನೀಡುತ್ತಿಲ್ಲ ಎಂದು ಮಂಗಳೂರಿನ ನ್ಯಾಯವಾದಿ ಎಲಿಜಬೆತ್ ನಜ್ರೆತ್ ಸೇರಿದಂತೆ ಹಲವು ಕುಟುಂಬಗಳ ಅಳಲು ಇದಾಗಿದೆ.

ಬಂಧುಗಳನ್ನು ಕಳೆದುಕೊಂಡು ವೆನ್‌ಲಾಕ್ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿರುವ ದೂರದ ಊರಿನ ಮಂದಿ ಭಾನುವಾರವೂ ಆಸ್ಪತ್ರೆಯಲ್ಲಿ ಅನ್ನ, ಆಹಾರವಿಲ್ಲದೆ ಬಂಧುಗಳ ಶವದ ಗುರುತು ಪತ್ತೆಗಾಗಿ ರೋಧಿಸಿ, ಶೋಧಿಸಿ ಕಂಗಾಲಾಗಿದ್ದಾರೆ. ಆದರೂ ವೈದ್ಯರು,ಸಿಬ್ಬಂದಿಗಳು ಶವದ ಗುರುತು ಪತ್ತೆಗಾಗಿ ಪ್ರಯತ್ನ ಮುಂದುವರಿಸಿದ್ದಾರೆ.

ಆಸ್ಪತ್ರೆಯಲ್ಲಿ ಜನಸಂದಣಿ-ಗೋಳಾಟ: ಭಾನುವಾರ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಜನವೋ, ಜನ.ಜಿಲ್ಲಾಡಳಿತ, ವೈದ್ಯರು ಶವದ ಗುರುತು ಪತ್ತೆಗೆ ಹರಸಾಹಸ ಪಡುತ್ತಿದ್ದರು. ಮತ್ತೊಂದೆಡೆ ಮಂಗಳೂರು, ಕಾಸರಗೋಡು, ಚಿಕ್ಕಮಗಳೂರು, ಉಡುಪಿ, ಕಾರವಾರ ಪ್ರದೇಶದಿಂದ ಕುಟುಂಬಿಕರು ಆಗಮಿಸಿದ್ದರು. ಇದಕ್ಕಾಗಿ ವಿವಿಧ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಶವಗಳನ್ನು ವೆನ್ಲಾಕ್ ಆಸ್ಪತ್ರೆಗೆ ಮಧ್ಯಾಹ್ನ ತರಲಾಗಿತ್ತು. ಒಂದೆಡೆ ಶವಗಳನ್ನು ತಂದಿದ್ದರೂ ಸಹ, ಶವಗಳ ಗುರುತು ಪತ್ತೆ ಹಚ್ಚುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ