ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಗಳೂರು ವಿಮಾನ ದುರಂತ: ಪರಿಹಾರ 76 ಲಕ್ಷ ರೂ! (Mangalore Plane Crash, Bajpe, Mangalore Airport Tragedy, Manmohan Singh)
Bookmark and Share Feedback Print
 
PTI
ಮಂಗಳೂರಿನಲ್ಲಿ ನಡೆದ ದೇಶ ಕಂಡ ಅತ್ಯಂತ ಭೀಕರ ವಿಮಾನ ಅಫಘಾತದಲ್ಲಿ ಮಡಿದ ಪ್ರತಿಯೊಬ್ಬನಿಗೂ ಸುಮಾರು 76 ಲಕ್ಷ ರೂಪಾಯಿಗಳವರೆಗೂ ಪರಿಹಾರ ಲಭಿಸುವ ಸಾಧ್ಯತೆಗಳಿವೆ.

ಪ್ರಧಾನಮಂತ್ರಿಗಳು ಘೋಷಿಸಿದ ಪರಿಹಾರವೂ ಸೇರಿದಂತೆ, ಉಳಿದ ಪರಿಹಾರಗಳು ಸೇರಿದರೆ 76 ಲಕ್ಷ ರೂಪಾಯಿಗಳಿಗೂ ಮಿಕ್ಕು ಪರಿಹಾರ ಪ್ರತಿಯೊಬ್ಬನ ಸಾವಿಗೆ ದೊರೆಯುತ್ತದೆ. ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ಹೇಳಿರುವಂತೆ, ಏರ್‌ಲೈನ್ಸ್ ಪ್ರತಿಯೊಬ್ಬನ ಸಾವಿಗೂ 1,60,000 ಯುಎಸ್ ಡಾಲರ್‌ಗಳನ್ನು ಅಂದರೆ ಸುಮಾರು 72 ಲಕ್ಷ ರೂಪಾಯಿಗಳ ಪರಿಹಾರ ಪಡೆಯಲಿದ್ದಾರೆ ಎಂದಿದ್ದಾರೆ. ಏರ್ ಆಕ್ಟ್ ತಿದ್ದುಪಡಿ ನಿಯಮಗಳ ಪ್ರಕಾರ, ಪ್ರತಿಯೊಬ್ಬನ ಸಾವಿಗೂ ಇಷ್ಟು ಪರಿಹಾರ ನೀಡಬೇಕಾಗುತ್ತದೆ.

ಇದಲ್ಲದೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಪ್ರತಿ ಕುಟುಂಬಕ್ಕೂ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನೂ ನೀಡಲಿದೆ. ಇವೆಲ್ಲವೂ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುತ್ತದೆ. ಇದಲ್ಲದೆ, ರಾಜ್ಯಗಳ ಪರಿಹಾರ ನಿಧಿಯಿಂದಲೂ ಪ್ರತ್ಯೇಕ ಪರಿಹಾರ ಪ್ಯಾಕೇಜ್ ಘೋಷಿಸಲಾಗಿದೆ. ಹೀಗಾಗಿ ಪ್ರತಿ ಮೃತರ ಕುಟುಂಬವೂ 76 ಲಕ್ಷ ರೂಪಾಯಿಗಳವರೆಗೂ ಪರಿಹಾರ ಪಡೆಯುವ ಅಧಿಕಾರ ಹೊಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ