ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಆರ್‌ಪಿಎಫ್ ಯೋಧರ ಹತ್ಯಾಕಾಂಡ: 6 ನಕ್ಸಲೀಯರ ಸೆರೆ (Naxal | Barsa Lakhma | CRPF | Naxalites | Chhattisgarh)
Bookmark and Share Feedback Print
 
ಕಳೆದ ತಿಂಗಳು ನಕ್ಸಲೀಯರು ದಾಳಿ ನಡೆಸಿ 76 ಮಂದಿ ಭದ್ರತಾ ಸಿಬ್ಬಂದಿಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತಿ ನಕ್ಸಲ್ ಕಮಾಂಡರ್ ಬಾರ್‌ಸಾ ಲಾಖ್ಮಾ ಸೇರಿದಂತೆ ಆರು ಮಂದಿ ನಕ್ಸಲೀಯರನ್ನು ಸೆರೆ ಹಿಡಿದಿರುವುದಾಗಿ ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಚಿಂತಾಲಾನಾರ್‌ ಸಮೀಪದ ಮೋರ್‌ಪಾಲಿ ಎಂಬಲ್ಲಿ ಕಳೆದ ರಾತ್ರಿ ಲಾಖ್ಮಾ ಸೇರಿದಂತೆ ಎರಡು ವಿವಿಧ ಘಟನೆಗಳಲ್ಲಿ ಆರು ಮಂದಿ ನಕ್ಸಲೀಯರನ್ನು ಸೆರೆ ಹಿಡಿದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಮರೇಶ್ ಮಿಶ್ರಾ ಹೇಳಿದರು.

ಏಪ್ರಿಲ್ 6ರಂದು ನಕ್ಸಲೀಯರು ನಡೆಸಿದ ಮಾರಣಹೋಮದಲ್ಲಿ 75ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಒರ್ವ ರಾಜ್ಯ ಪೊಲೀಸ್ ಕಾನ್ಸ್‌ಸ್ಟೇಬಲ್ ಸಾವನ್ನಪ್ಪಿದ್ದರು. ಇದು ಸ್ವಾತಂತ್ರ್ಯ ನಂತರ ನಕ್ಸಲೀಯರು ನಡೆಸಿದ ದೊಡ್ಡ ನರಮೇಧ ಇದಾಗಿದ್ದು, ಘಟನೆಗೆ ಸಂಬಂಧಿಸಿದಂತೆ 6ಮಂದಿಯನ್ನು ಸೆರೆಹಿಡಿಯಲಾಗಿದೆ.

ವಯರ್‌ಲೆಸ್ ಸೆಟ್ ಮೂಲಕ ಸಿಆರ್‌ಪಿಎಫ್ ಸಿಬ್ಬಂದಿಗಳ ಎಲ್ಲ ಚಲನವಲಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಂತರ ಅವರ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು ಎಂದು ಲಾಖ್ಮಾ ಪೊಲೀಸ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಯಾಮ್ ಹಿಡ್ಮಾ, ಪೋಡಿಯಾಮಿ ಹಿಡ್ಮಾ, ಕುವಾಸಿ ಬುದ್ರಾ, ಓಯಾ ಗಂಗಾ, ದುರಾ ಜೋಗಾ ಸೇರಿದಂತೆ ಐದು ಮಂದಿಯನ್ನು ಮಿನಾಪಾ ಗ್ರಾಮದಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಸ್ವಯಂ ಘೋಷಿತ ಕಮಾಂಡರ್ ಲಾಖ್ಮಾ ಮೋರ್‌ಪಾಲಿ ಎಂಬಲ್ಲಿ ಸೆರೆ ಹಿಡಿಯಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ