ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಗಳೂರು ವಿಮಾನ ದುರಂತ; ಬ್ಲ್ಯಾಕ್ ಬಾಕ್ಸ್ ಪತ್ತೆ ! (Mangalore | Air India Express Crash | Black Box | Bajpe Airport)
Bookmark and Share Feedback Print
 
ಮಂಗಳೂರು ವಿಮಾನ ದುರಂತ
PTI
ಮಂಗಳೂರು: ಶನಿವಾರ ದುರಂತ ಸಂಭವಿಸಿದ ಏರ್‌ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಕೊನೆಗೂ ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ತಿರುವು ಲಭಿಸಿದಂತಾಗಿದೆ. ಆ ಮೂಲಕ ಇಂಜಿನಿಯರ್‌ಗಳು, ಅಧಿಕಾರಿಗಳು ಮತ್ತು ಪೊಲೀಸರು ನಿರಾಳತೆ ಅನುಭವಿಸುವಂತಾಗಿದೆ.

ಸತತ ಮೂರು ದಿನದ ತೀವ್ರ ಶೋಧದ ನಂತರ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು, ಡಿಜಿಸಿಎ ಅಧಿಕಾರಿಗಳು ಧೃಢಿಕರಿಸಿದ್ದಾರೆ.

ಸ್ಫೋಟದ ತೀವ್ರತೆಯಿಂದಾಗಿ ಬ್ಲ್ಯಾಕ್ ಬಾಕ್ಸ್ ಮಣ್ಣಿನಡಿಯಲ್ಲಿ ಹುದುಗಿ ಹೋಗಿತ್ತು. ಆದರೆ ಜೆಸಿಬಿ ನೆರವಿನಿಂದ ಮಣ್ಣನ್ನು ಅಗೆಯುವ ಮೂಲಕ ಬ್ಲ್ಯಾಕ್ ಬಾಕ್ಸನ್ನು ಕಂಡುಹಿಡಿಯಲಾಗಿದೆ.

ಈ ಹಿಂದೆ ವಿಮಾನ ಅಪಘಾತ ವೇಳೆ ಬ್ಲ್ಯಾಕ್ ಬಾಕ್ಸ್ ಕೂಡಾ ಸ್ಫೋಟಗೊಂಡಿರುವ ಸಾಧ್ಯತೆಯಿದೆಯಿದೆಯೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.

ಮೇ 22, ಶನಿವಾರದಂದು ನಡೆದಿದ್ದ ಭೀಕರ ವಿಮಾನ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದರು. ಆದರೆ ಪವಾಡ ಸದೃಶ ಘಟನೆಯಲ್ಲಿ ಎಂಟು ಮಂದಿ ಪಾರಾಗಿದ್ದರು. ಈ ಹಿಂದೆಯೇ ವಾಯ್ಸ್ ರೆಕಾರ್ಡರ್ ಪತ್ತೆಯಾಗಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ