ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಇಬ್ಬರು ಮಹಿಳೆಯರ ಮಾತು ಕೇಳ್ತೇನೆ!: ಪ್ರಧಾನಿ (Manmohan Singh | Gursharan Kaur | Sonia Gandhi | Congress)
Bookmark and Share Feedback Print
 
ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಇಬ್ಬರು ಮಹಿಳೆಯರಿಂದ ಸಲಹೆ ಕೇಳುವ ಮೂಲಕ ಸಾಕಷ್ಟು ಪರಿಹಾರ ಕಂಡುಕೊಂಡಿತ್ತಾರಂತೆ. ಅವರಿಬ್ಬರು ಯಾರೆಂದರೆ...ಸಿಂಗ್ ಪತ್ನಿ ಗುರ್‌ಶರಣ್ ಕೌರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.

ಯುಪಿಎ ಸರ್ಕಾರ ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮಾಧ್ಯಮಮಿತ್ರರಿಂದ ಎದುರಾದ ನಗುತ್ತಲೇ ಸಿಂಗ್ ಈ ರೀತಿ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ವಿವಿಧ ಸಮಸ್ಯೆಗಳಿಗೆ ಕೌರ್ ಮತ್ತು ಸೋನಿಯಾಗಾಂಧಿ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆಂದು ಸಿಂಗ್ ಹೇಳಿದರು. ಹಾಗಾಗಿ ಸೋನಿಯಾಗಾಂಧಿ ಮತ್ತು ಕೌರ್ ಅವರು ಸಕಾಲದಲ್ಲಿ ನೀಡಿರುವ ಉಪದೇಶ, ಸಲಹೆಗಳಿಂದ ತಾನು ತುಂಬಾ ಪ್ರಯೋಜನ ಪಡೆದಿರುವುದಾಗಿ ಮುಕ್ತವಾಗಿ ಹೇಳಿಕೊಂಡರು.

ಅಲ್ಲದೇ ತಾನು ಅವರಿಬ್ಬರಿಂದ ಉತ್ತಮವಾದ ಸಲಹೆ ಪಡೆಯುವ ಮೂಲಕ ಸಂತೋಷಗೊಂಡಿರುವುದಾಗಿಯೂ ಹೇಳಿದರು. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.

ಸೋನಿಯಾ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸೋನಿಯಾಗಾಂಧಿ ಮತ್ತು ನಿಮ್ಮ ನಡುವೆ ಅಪನಂಬಿಕೆ ಇದೆಯಲ್ಲ ಎಂಬ ಊಹಾಪೋಹಗಳಿವೆಯಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಈ ಹೇಳಿಕೆ ಶುದ್ಧ ಸುಳ್ಳು. ಸೋನಿಯಾ ಮತ್ತು ನನ್ನ ನಡುವೆ ಯಾವುದೇ ಅಪನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸೋನಿಯಾಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದಾರೆ. ಹಾಗೆಯೇ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಕೂಡ. ನಾನು ಕಾಂಗ್ರೆಸ್ಸಿಗ. ವಾರಕ್ಕೊಮ್ಮೆ ಅವರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಸಮನ್ವಯತೆ ಇಲ್ಲ ಎಂಬ ವಾದದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ