ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೈಂಗಿಕ ಕಿರುಕುಳ: ರಾಥೋಡ್ ಶಿಕ್ಷೆ ಪ್ರಮಾಣ ಹೆಚ್ಚಳ (Ruchika Girhotra | Chandigarh district court | Rathore | CBI)
Bookmark and Share Feedback Print
 
ರುಚಿಕಾ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಹರ್ಯಾಣದ ಮಾಜಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಎಸ್‌ಪಿಎಸ್ ರಾಥೋಡ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಚಂಡೀಗಢ್ ಜಿಲ್ಲಾ ಕೋರ್ಟ್ ವಜಾಗೊಳಿಸಿ, ಶಿಕ್ಷೆಯ ಪ್ರಮಾಣವನ್ನು ಒಂದೂವರೆ ವರ್ಷಕ್ಕೆ ಹೆಚ್ಚಿಸಿ ಮಂಗಳವಾರ ತೀರ್ಪು ನೀಡಿದೆ.

ರುಚಿಕಾ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೋಷಿ ಎಂದಿರುವುದು ಹಾಗೂ ಆರು ತಿಂಗಳ ಕಾಲ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ರಾಥೋಡ್ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಗುರ್ಬಿರ್ ಸಿಂಗ್ ಅವರು ಮೇಲ್ಮನವಿಯನ್ನು ವಜಾಗೊಳಿಸಿ, 18ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿರುವುದಾಗಿ ತೀರ್ಪು ನೀಡಿದರು.

ರುಚಿಕಾ ಗಿರಿಹೋತ್ರಾ 14 ವರ್ಷದವಳಾಗಿದ್ದಾಗ (1990 ಆಗೋಸ್ಟ್ 11) ರಾಥೋಡ್ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ. ನಂತರ ರುಚಿಕಾ (1993) ಆತ್ಮಹತ್ಯೆಗೆ ಶರಣಾಗಿದ್ದಳು. ಈ ಬಗ್ಗೆ ಮನೆಯವರು ರಾಥೋಡ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದರು.

ಅಂತೂ 20ವರ್ಷಗಳ ನಂತರ ರಾಥೋಡ್ ಜೈಲುಕಂಬಿ ಎಣಿಸುವಂತಾಗಿದೆ.ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ರಾಥೋಡ್‌ನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿ, ಕೂಡಲೇ ಸ್ಥಳೀಯ ಬುರೈಲ್ ಜೈಲಿಗೆ ಕರೆದೊಯ್ಯುವಂತೆ ನಿರ್ದೇಶನ ನೀಡಿತ್ತು. ತನಗೆ ತೀವ್ರ ಎದೆನೋವು ಇರುವುದಾಗಿ ಹೇಳಿಕೊಂಡಿದ್ದರಿಂದ ಹಿನ್ನೆಲೆಯಲ್ಲಿ ಬುರೈಲಿ ಜೈಲಿನಲ್ಲಿ ರಾಥೋಡ್‌ಗೆ ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ನಡೆಸುವಂತೆಯೂ ನ್ಯಾಯಾಧೀಶ ಸಿಂಗ್ ಸೂಚಿಸಿದರು.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನೀಡಿರುವ ಆರು ತಿಂಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ರಾಥೋಡ್ ಮೇಲ್ಮನವಿ ಸಲ್ಲಿಸಿದ್ದರೆ, ಆರೋಪದ ಬಗ್ಗೆ ಸರಿಯಾದ ಸಾಕ್ಷ್ಯಾಧಾರಗಳು ಇದ್ದು ರಾಥೋಡ್‌ಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ಕೋರಿ ಸಿಬಿಐ ಕೂಡ ಈ ಸಂದರ್ಭದಲ್ಲಿ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ