ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಡಿಗೆ ತಾಯಿಗೆ ಅವಳಿ ಮಕ್ಕಳ ಜನನ (Surrogate mother, Bhopal, Twin Baby)
Bookmark and Share Feedback Print
 
35ರ ಹರೆಯರ ಬಾಡಿಗೆ ತಾಯಿಗೀಗ ಅವಳಿ ಮಕ್ಕಳು ಜನಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಹೆಸರು ಹೇಳಲಿಚ್ಛಿಸದ ಎನ್ಆರ್ಐ ದಂಪತಿಗೆ ಮಗು ಪಡೆಯುವ ಆಸೆಯಿದ್ದರೂ ಅದು ನೆರವೇರಿರಲಿಲ್ಲ. ಹೀಗಾಗಿ ಅವರು ಭಾರತಕ್ಕೆ ಬಂದು 35 ಹರೆಯದ ಮಹಿಳೆಯನ್ನು ಬಾಡಿಗೆ ತಾಯಿಯಾಗುವ ಒಪ್ಪಂದಕ್ಕೆ ಸಹಿ ಮಾಡಿದ್ದರು. ಇದೀಗ ಅವರ ಕನಸು ನನಸಾಗಿದ್ದು ಅವಳಿ ಮಕ್ಕಳ ಜನನವಾಗಿದೆ. ಮಕ್ಕಳು ಆರೋಗ್ಯವಾಗಿದ್ದು, ಲವಲವಿಕೆಯಿಂದಿವೆ ಎಂದು ಆಸ್ಪತ್ರೆಯ ತಜ್ಞ ವೈದ್ಯರು ತಿಳಿಸಿದ್ದಾರೆ.

ಬಾಡಿಗೆ ತಾಯಿಯಾಗುವ ಒಪ್ಪಂದದ ಪ್ರಕಾರ ದಂಪತಿ ಆ ಮಹಿಳೆಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಬೇಕಿತ್ತು. ಆದರೆ ಅವಳಿ ಮಕ್ಕಳಾದ ಸಂಭ್ರಮದಲ್ಲಿರುವ ದಂಪತಿಯ ಖುಷಿಗೆ ಪಾರವೇ ಇಲ್ಲವಾದ್ದರಿಂದ ದುಪ್ಪಟ್ಟು ಹಣ ಅಂದರೆ ಎರಡು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಮಗುವಿನ ಹೆರಿಗೆ ಸಂಬಂಧ ಆಕೆಯ ಆರೋಗ್ಯ ಸಂಬಂಧಿ ಸಂಪೂರ್ಣ ವೆಚ್ಚವನ್ನು ನೀಡಿದ್ದಾರೆ. ಹೆರಿಗೆಯ ಆಸ್ಪತ್ರೆಯ ಬಿಲ್ ಸೇರಿದಂತೆ ಆಕೆಯ ಆಹಾರದ ವೆಚ್ಚವನ್ನೂ ಈ ದಂಪತಿ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ