ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಹಿಂಸೆ ಸಾರಲು ಮಹಾತ್ಮಗಾಂಧಿ ದೇವಾಲಯ!: ಮೋದಿ ಇಚ್ಛೆ (Mahatma Gandhi | Narendra Modi | Gandhinagar | Gandhians)
Bookmark and Share Feedback Print
 
PTI
ಹಿಂದುತ್ವದ ಪ್ರತಿಪಾದಕ, ಮುಸ್ಲಿಮ್ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಇದೀಗ ತಾನು ಅಹಿಂಸೆಯ ಪ್ರತೀಕ ಎಂಬುದನ್ನು ಸಾಬೀತುಪಡಿಸಲು ಹೊರಟಿರುವುದಾಗಿ ಗಾಂಧಿವಾದಿಗಳು ಕಿಡಿಕಾರಿದ್ದು, ಅದಕ್ಕೆ ಪೂರಕ ಎಂಬಂತೆ ರಾಜ್ಯದ ಗಾಂಧೀನಗರದಲ್ಲಿ ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾತ್ಮಗಾಂಧಿ ದೇವಸ್ಥಾನ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳುವ ಮೂಲಕ ಹಿರಿಯ ಗಾಂಧಿವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ರಾಷ್ಟ್ರಪಿತ ಮಹಾತ್ಮಾಗಾಂಧಿ ಸ್ಮಾರಕ ನಿರ್ಮಾಣ ಮಾಡುವ ಮೂಲಕ ನಾವು ಮುಂದಿನ ಪೀಳಿಗೆಗೆ ಮಹಾತ್ಮನ ತತ್ವ, ಅಹಿಂಸೆಯ ಕುರಿತ ಸಂದೇಶವನ್ನು ಸಾರಬೇಕೆನ್ನುವುದೇ ನಮ್ಮ ಉದ್ದೇಶವಾಗಿದೆ ಎಂದು ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಗಾಂಧಿವಾದಿಗಳಿಂದ ತೀವ್ರ ವಿರೋಧ: ಅರರೇ ಇದೇನು ಇಮಾಮ್ ಸಾಬಿಗೂ ಗೋಕುಲಾಷ್ಠಮಿಗೂ ಏನು ಸಂಬಂಧ ಎಂಬಂತೆ ಗಾಂಧಿವಾದಿಗಳು ನರೇಂದ್ರ ಮೋದಿಯ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಯೋಜನೆ ಮೂಲಕ ನರೇಂದ್ರ ಮೋದಿ ಮಹಾತ್ಮನ ತತ್ವ, ಸಿದ್ದಾಂತದ ಪರಂಪರೆಯಯನ್ನು ದುರಾಕ್ರಮಣದ ಮೂಲಕ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಗಾಂಧಿಗೆ ದೇವಾಲಯವನ್ನು ಕಟ್ಟಿ ತಾನೊಬ್ಬ ಸುಭಗ ಎನ್ನುವ ಮುಖವಾಡ ಹಾಕುವ ಯತ್ನ ಮೋದಿಯದ್ದಾಗಿದೆ ಎಂದು ಕಿಡಿಕಾರಿರುವ ಗಾಂಧಿವಾದಿಗಳು, ಕೂಡಲೇ ಯೋಜನೆಯ ಕಾರ್ಯವನ್ನು ನಿಲ್ಲಿಸುವಂತೆ ಮೋದಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.

ಪಾಟಾಕ್ ಮತ್ತು ಚೀನು ವೈದ್ಯ ಸೇರಿದಂತೆ ಹಲವು ಹಿರಿಯ ಗಾಂಧಿವಾದಿಗಳು ಈಗಾಗಲೇ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಗಾಂಧಿ ದೇವಾಲಯ ಕಟ್ಟದಂತೆ ಒತ್ತಡ ಹೇರಿದ್ದಾರೆ. ಮಹಾತ್ಮಗಾಂಧಿ ಕುರಿತಂತೆ ಯಾವುದೇ ಕಾರ್ಯನಿರ್ವಹಿಸುವ ನೈತಿಕ ಹಕ್ಕು ಮೋದಿಗಿಲ್ಲ ಎಂದು ವಾದಿಸಿದ್ದಾರೆ.

ಅಲ್ಲದೇ ಸ್ವತಃ ಮಹಾತ್ಮಗಾಂಧಿಯೇ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದರು. ಹಾಗಿದ್ದ ಮೇಲೆ ಗಾಂಧಿಯ ಹೆಸರಲ್ಲಿ ಮೋದಿ ಸರ್ಕಾರ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ದೇವಾಲಯ ನಿರ್ಮಿಸುವಂತಹ ಅಗತ್ಯವಾದರು ಏನು ಎಂದು ಗಾಂಧಿವಾದಿಗಳು ಪ್ರಶ್ನಿಸಿದ್ದಾರೆ.

2002ರಲ್ಲಿ ಗುಜರಾತ್ ನರಮೇಧದ ಆರೋಪದಿಂದ ಮುಕ್ತವಾಗುವ ನಿಟ್ಟಿನಲ್ಲಿ ಮೋದಿ ಇದೀಗ ಮಹಾತ್ಮಗಾಂಧಿ ಹೆಸರಲ್ಲಿ ದೇವಾಲಯ ಕಟ್ಟಲು ಮುಂದಾಗಿರುವುದಾಗಿ ಮತ್ತೊಬ್ಬ ಗಾಂಧಿವಾದಿ ಪ್ರಕಾಶ್ ಶಾ ದೂರಿದ್ದು, ಆದರೆ ಮೋದಿ ಇಂದಲ್ಲ ಮುಂದೊಂದು ದಿನ ಅವರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಉತ್ತರ ಕೊಡಲೇಬೇಕಾಗುತ್ತದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ