ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮರ್ ಸಿಂಗ್ ಬಿಟ್ಟು ಎಸ್ಪಿಗೆ: ಜಯಾ ಬಚ್ಚನ್‌ಗೆ ರಾಜ್ಯಸಭಾ ಟಿಕೆಟ್! (Jaya Bachchan | Samajwadi Party | Mulayam Singh | Amar Singh)
Bookmark and Share Feedback Print
 
IFM
ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದಿಂದ ಮತ್ತೆ ಜಯಾ ಬಚ್ಚನ್ ನಾಮ ನಿರ್ದೇಶನಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಬಚ್ಚನ್ ಕುಟುಂಬದ ಪರಮಾಪ್ತ ಗೆಳೆಯ ಅಮರ್ ಸಿಂಗ್ ಹಾಗೂ ಜಯಾ ಬಚ್ಚನ್ ನಡುವಿನ ಅಂತರ ಹೆಚ್ಚಿರುವುದು ಅಧಿಕೃತಗೊಂಡಂತಾಗಿದೆ.

ಇದೀಗ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಹಾಗೂ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಖಿಲೇಷ್ ಯಾದವ್ ಅವರು ಅಧಿಕೃತವಾಗಿ ಜಯಾ ಬಚ್ಚನ್ ಹೆಸರನ್ನು ಉತ್ತರ ಪ್ರದೇಶದ ರಾಜ್ಯ ಸಭಾ ಸ್ಥಾನಕ್ಕೆ ನಾಮ ನಿರ್ದೇಶನಗೊಳಿಸಿರುವುದಾಗಿ ಖಚಿತಪಡಿಸಿದ್ದಾರೆ.

ಇದೇ ವೇಳೆ ಸಮಾಜವಾದಿ ಪಕ್ಷ ರಶೀದ್ ಮಸೂದ್ ಅವರನ್ನೂ ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನಗೊಳಿಸಿದ್ದಾರೆ. ಇಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಖಿಲೇಷ್ ಯಾದವ್, ಸಮಾಜವಾದಿ ಪಕ್ಷ ಇದೀಗ ಜಯಾ ಬಚ್ಚನ್ ಹಾಗೂ ರಶೀದ್ ಮಸೂದ್ ಅವರ ಹೆಸರುಗಳನ್ನು ಅಂತಿಮಗೊಳಿಸಿದ್ದು ನಾಮ ನಿರ್ದೇಶನಗೊಳಿಸಿದೆ ಎಂದು ಪ್ರಕಟಿಸಿದರು.

ಈ ಹಿಂದೆ ಜಯಾ ಬಚ್ಚನ್ ಅಮರ್ ಸಿಂಗ್ ಅವರನ್ನು ನನ್ನ ಸಹೋದರ ಎಂದೇ ಕರೆಯುತ್ತಿದ್ದರು. ಅಲ್ಲದೆ, ಅಮರ್ ಸಿಂಗ್ ಬಚ್ಚನ್ ಕುಟುಂಬದ ಅತ್ಯಂತ ನಿಕಟವರ್ತಿಗಳೂ ಆಗಿದ್ದರು. ಆದರೆ ಇತ್ತೀಚೆಗೆ ಕೆಲ ಸಮಯದ ಹಿಂದೆ ಅಮರ್ ಸಿಂಗ್ ಹಾಗೂ ಜಯಾ ಬಚ್ಚನ್ ನಡುವಿನ ವಿರಸದ ಸುಳಿವು ಸಿಕ್ಕಿದ್ದು, ಇದೀಗ ಅದು ಅಧಿಕೃತಗೊಂಡಂತಾಗಿದೆ. ಆದರೂ, ಮೂಲಗಳ ಪ್ರಕಾರ ಬಚ್ಚನ್ ಕುಟುಂಬ ಹಾಗೂ ಅಮರ್ ಸಿಂಗ್ ನಡುವೆ ಖಾಸಗಿ ಸಂಬಂಧಕ್ಕೆ ಇದರಿಂದ ಯಾವುದೇ ಪೆಟ್ಟು ಬಿದ್ದಿಲ್ಲ ಎನ್ನಲಾಗುತ್ತಿದ್ದು, ರಾಜಕೀಯವಾಗಿ ಮಾತ್ರ ಭಿನ್ನ ನಿರ್ಧಾರಗಳಿವೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಅಮರ್ ಸಿಂಗ್ ಕೂಡಾ ಪ್ರತಿಕ್ರಿಯಿಸಿದ್ದು, ಜಯಾ ಬಚ್ಚನ್ ಅವರಿಗೆ ತಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಎಲ್ಲಾ ಹಕ್ಕಿದೆ. ಅವರು ಸಮಾಜವಾದಿ ಪಕ್ಷದ ಪರವಾಗಿ ನಿಂತರೂ ನನ್ನ ಹಾಗೂ ಅವರ ಕುಟುಂಬದ ನಡುವಿನ ಸಂಬಂಧಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂದಿದ್ದಾರೆ.

ಈ ಹಿಂದೆ ಜಯಾ ಬಚ್ಚನ್ ಅವರು ಅಮರ್ ಸಿಂಗ್ ಅವರನ್ನು ಪಕ್ಷ ಹೊರಹಾಕಿದ್ದ ಸಂದರ್ಭ, ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಅಮರ್ ಸಿಂಗ್ ಹಾಗೂ ಪಕ್ಷದ ನಡುವೆ ಅಭಿಪ್ರಾಯ ಬೇಧಗಳೇ ಇದಕ್ಕೆ ಕಾರಣವಾಗಿದೆ ಎಂದೂ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ