ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೆನ್ನೈ ಇನ್ಮುಂದೆ ಭಿಕ್ಷುಕ ಮುಕ್ತವಾಗಲಿದೆಯಂತೆ! (Chennai | banned begging | Chennai Corporation | Karunanidhi)
Bookmark and Share Feedback Print
 
ಕೊಳಗೇರಿ ಹಾಗೂ ಭಿಕ್ಷುಕರೇ ಹೆಚ್ಚಾಗಿರುವ ಚೆನ್ನೈಯ ಮಹಾನಗರ ಪಾಲಿಕೆ, ಮಹಾನಗರವನ್ನು ಭಿಕ್ಷುಕ ಮುಕ್ತವನ್ನಾಗಿ ಮಾಡುವ ಕುರಿತು ವಿಶೇಷ ಗಮನಹರಿಸುವ ಮೂಲಕ ಭಿಕ್ಷುಕರಿಗೊಂದು ಹೊಸ ಜೀವನ ಕಲ್ಪಿಸುವ ಮಹತ್ವದ ನಿರ್ಧಾರ ಸರ್ಕಾರ ಕೈಗೊಂಡಂತಾಗಿದೆ.

ಹೀಗಾಗಿ ಇನ್ನು ಮುಂದೆ ಚೆನ್ನೈನಲ್ಲಿ ಇರುವವರಿಗಾಗಲಿ, ಚೆನ್ನೈಗೆ ಭೇಟಿ ನೀಡುವವರಿಗೆ ಇಲ್ಲಿನ ಬೀದಿ, ಬೀದಿ, ಬಸ್ ನಿಲ್ದಾಣಗಳಲ್ಲಿ ಕೈಯೊಡ್ಡಿ ಭಿಕ್ಷೆ ಕೇಳುವವರು ಕಾಣ ಸಿಗುವುದಿಲ್ಲ ಎಂಬ ಭರವಸೆಯ ಮಾತು ಪಾಲಿಕೆಯ ಅಧಿಕಾರಿಗಳದ್ದು.

ಈ ಕುರಿತು ಎನ್‌ಜಿಓನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪಾಲಿಕೆ, ನಗರದ ಭಿಕ್ಷುಕರಿಗೆ ಸೂಕ್ತ ತರಬೇತಿ ನೀಡಿ, ಅವರಿಗೆ ಜೀವನೋಪಾಯದ ಮಾರ್ಗ ಕಲ್ಪಿಸಲು ಮುಂದಾಗಿದೆ. ಹಾಗೆಯೇ ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಚೆನ್ನೈ ಪಾಲಿಕೆ ಆಯುಕ್ತ ರಾಜೇಶ್ ಲಖೋನಿ, ನಾನು ಭಿಕ್ಷುಕರನ್ನು ನಗರದಿಂದ ಓಡಿಸುತ್ತಿಲ್ಲ. ಬದಲಾಗಿ ಅವರಿಗೆ ಸೂಕ್ತ ಜೀವನದ ಮಾರ್ಗವನ್ನು ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬಹುತೇಕ ಭಿಕ್ಷುಕರು ಲೂರ್ಧ್ ಹಾಗೂ ಕಮಲಾ ಅವರಂತೆ ಅಂಗವಿಕಲರಾಗಿದ್ದು, ಅವರು ಯಾವುದೇ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಅವರೆಲ್ಲರ ಮಕ್ಕಳು ಶಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಪಾಲಿಕೆ ಈ ನೂತನ ಯೋಜನೆಯಿಂದ ಒಳ್ಳೆಯ ಆದಾಯದ ಭರವಸೆ ನೀಡಿದ್ದರಿಂದ ಅವರೆಲ್ಲ ಭಿಕ್ಷೆ ಬೇಡುವುದನ್ನು ತ್ಯಜಿಸಲು ನಿರ್ಧರಿಸಿದ್ದಾರೆ.

ಏತನ್ಮಧ್ಯೆ ನಮ್ಮ ಮಕ್ಕಳ ಶಾಲೆಯ ಫೀಸು, ಅವರ ಪುಸ್ತಕ, ಬಟ್ಟೆಗಳಿಗೆ ಯಾರು ಸಹಾಯ ಮಾಡುತ್ತಾರೆ?ಎಂದು ಪ್ರಶ್ನಿಸಿರುವ ಭಿಕ್ಷುಕಿ ಕಮಲಾ ಅವರು,ಒಂದೊಮ್ಮೆ ಪಾಲಿಕೆಯವರು ಅದನ್ನೆಲ್ಲ ನೋಡಿಕೊಳ್ಳುವುದಾದರೆ, ಭಿಕ್ಷೆ ಬೇಡುವುದನ್ನು ನಿಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ