ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಂ ಮಹಿಳಾ ಉದ್ಯೋಗಿಗಳು ಮುಖಗವಸು ಧರಿಸಿ: ಹೊಸ ಫತ್ವಾ (Muslim women, Darul Iftah of Bareilvi, Islamic Law, Veil, Darul Uloom Deoband)
Bookmark and Share Feedback Print
 
ಮುಸ್ಲಿಂ ಮಹಿಳೆಯರು ಕಚೇರಿಗಳಲ್ಲಿ ಕೆಲಸ ಮಾಡುವುದು ಇಸ್ಲಾಂ ಕಾನೂನಿಗೆ ವಿರುದ್ಧ ಎಂದು ದಿಯಾಬಂದ್ ಸಂಘಟನೆ ಫತ್ವಾ ಹೊರಡಿಸಿದ್ದ ಬೆನ್ನಲ್ಲೇ ಇದೀಗ ಬಾರೇಲ್ವಿ ಸಂಘಟನೆ ಹೊಸ ಫತ್ವಾವೊಂದು ಹೊರಡಿಸಿದೆ. ಮುಸ್ಲಿಂ ಮಹಿಳೆಯರು ಉದ್ಯೋಗ ಮಾಡಬಹುದಾದರೂ, ಮುಖಗವಸು ಧರಿಸಿಯೇ ಕಚೇರಿಗಳಿಗೆ ಹಾಜರಾಗಬೇಕು ಎಂಬುದೇ ಈ ಹೊಸ ಫತ್ವಾ.

ದಾರೂಲ್ ಇಫ್ತಾದ ಬಾರೇಲ್ವಿ ಎಂಬ ಮುಸ್ಲಿಂ ಸಂಘಟನೆಯ ಶರೀಷ್ ಮಹಮ್ಮದ್ ಅಯೂಬ್ ಅಲೀಸ್ ರಿಝ್ವಿ ಈ ಫತ್ವಾ ಹೊರಡಿಸಿದ್ದು, ಫತ್ವಾದಲ್ಲಿ ಮುಸ್ಲಿಂ ಮಹಿಳೆಯರು ಕಚೇರಿಗಳಲ್ಲಿ ದುಡಿಯಬಹುದಾದರೂ ಕೆಲವು ಷರತ್ತುಗಳಿಗೆ ಒಪ್ಪಿ ಬುರ್ಖಾ ಇಲ್ಲವೇ ಮುಖಗವಸು ಧರಿಸಿಯೇ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದೆ.

ಆದರೆ ಈ ಷರತ್ತುಗಳು ಏನೆಂಬುದನ್ನು ಫತ್ವಾದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಆದರೆ ಇಸ್ಲಾಮಿಕ್ ಕಾನೂನುಗಳ ಪ್ರಕಾರ, ಬ್ಯಾಂಕ್‌ಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡಬಹುದಾಗಿದೆ ಎಂದು ವಿವರಿಸಿದೆ. ಈ ಫತ್ವಾವನ್ನು ಉತ್ತರ ಪ್ರದೇಶದ ಬರೇಲಿಯ ಸಮ್ಮೇಳನವೊಂದರಲ್ಲಿ ಹೊರಡಿಸಲಾಗಿದೆ.

ಇದಕ್ಕೂ ಮೊದಲು ದಾರುಲ್ ಉಲೂಮ್ ದಿಯಾಬಂದ್ ಮುಸ್ಲಿಂ ಸಂಘಟನೆ ಮುಸ್ಲಿಂ ಮಹಿಳೆಯರು ಕಚೇರಿಗಳಲ್ಲಿ ಕೆಲಸ ಮಾಡುವುದು ಶರಿಯತ್‌ಗೆ ವಿರೋಧವಾದುದು ಎಂದು ಫತ್ವಾ ಹೊರಡಿಸಿತ್ತು. ಅಲ್ಲದೆ, ಕಚೇರಿಗಳಲ್ಲಿ ಪುರುಷ ಕೆಲಸಗಾರರ ಜೊತೆ ಬೆರೆಯುವುದನ್ನು ಈ ಸಂಘಟನೆ ವಿರೋಧಿಸಿತ್ತು. ಜೊತೆಗೆ, ಬರೆಯುವ ಅಥವಾ ಲೆಕ್ಕ ಹಾಕುವ ಮತ್ತಿತರ ಕುಳಿತು ಮಾಡುವ ಬ್ಯಾಂಕಿಂಗ್ ಕೆಲಸಗಳೂ ಕೂಡಾ ಮುಸ್ಲಿಂ ಕಾನೂನಿನ ಪ್ರಕಾರ ಮಹಿಳೆಯರು ಮಾಡಬಾರದು ಎಂದು ದಿಯಾಬಂದ್ ಫತ್ವಾ ಹೊರಡಿಸಿತ್ತು. ಆದರೆ, ಇದೀಗ ಬಾರೇಲ್ವಿ ಸಂಘಟನೆ ಮಾತ್ರ ಮುಖಗವಸು ಹಾಕಿ ಕೆಲಸ ಮಾಡಬಹುದು ಎಂದು ಫತ್ವಾ ಹೊರಡಿಸಿದೆ. ಆದರೆ, ದಿಯಾಬಂದ್ ಹಾಗೂ ಬಾರೇಲ್ವಿ ಸಂಘಟನೆಗಳೆರಡೂ ಸುನ್ನಿಗೆ ಸೇರಿದ ಸಂಘಟನೆಗಳಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ