ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನೆರಡೇ ದಿನಗಳಲ್ಲಿ ಆರಂಭವಾಗಲಿದೆ ಮಳೆಗಾಲ (India Meteorological Department | National Climate Center | Monsoon | Rain)
Bookmark and Share Feedback Print
 
PTI
ಭಾರತದ ವಾರ್ಷಿಕ ಮಳೆಗಾಲ ಆರಂಭವಾಗಲು ಇನ್ನೂ ಎರಡು ದಿನಗಳು ಕಾಯಬೇಕಿದೆ. ಈಗಾಗಲೇ ಲೈಲಾ ಚಂಡಮಾರುತ ಅಪ್ಪಳಿಸಿ ಕರಾವಳಿ ತೀರದಲ್ಲಿ ಹಾಗೂ ದ್ವೀಪ ಸಮೂಹಗಳಲ್ಲಿ ಭಾರೀ ಮಳೆಯಾದರೂ, ವಾತಾವರಣ ಮತ್ತೆ ಸಹಜ ಸ್ಥಿತಿಗೆ ಮರಳಿರುವುದರಿಂದ ಮಳೆಗಾಲ ಆರಂಭವಾಗಲು ಕೊಂಚ ದಿನ ಬೇಕಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಪೂನಾದಲ್ಲಿರುವ ರಾಷ್ಟ್ರೀಯ ಹವಾಮಾನ ಇಲಾಖೆಯ ನಿರ್ದೇಶಕ ಡಿ.ಶಿವಾನಂದ ಪೈ ಅವರ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಮಳೆ ಮಾರುತಗಳು ಅತ್ಯಂತ ದುರ್ಬಲವಾಗಿದ್ದು, ಇದು ಇನ್ನೂ ಸಬಲಗೊಳ್ಳಲು ಕನಿಷ್ಟ ಎರಡು ದಿನಗಳಾದರೂ ಬೇಕಾಗಬಹುದು. ಹೀಗಾಗಿ ಮೂರ್ನಾಲ್ಕು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ ಎಂದು ತಿಳಿಸಿದೆ.

ಜೂನ್- ಸೆಪ್ಟೆಂಬರ್‌ನ ಮಾನ್ಸೂನ್ ಕೇರಳ ತೀರವನ್ನು ಮೇ 30ರಂದು ತಲುಪಲಿದೆ. ಈಗಾಗಲೇ ಕೇರಳದಲ್ಲಿ ಮಳೆ ಸುರಿಯುತ್ತಿದ್ದರೂ, ಮಾನ್ಸೂನ್ ಮಾರುತಗಳ ಫಲವಾಗಿ ಈ ಮಳೆ ಸುರಿಯುತ್ತಿಲ್ಲ. ಜೂನ್ ತಿಂಗಳ ಮಳೆಯ ಮಾರುತ ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹವನ್ನು ಮಾನ್ಸೂನ್ ಮಾರುತ ತಲುಪಿದ್ದು, ಮೇ 17ರಂದೇ ಅಲ್ಲಿ ಮಳೆ ಆರಂಭವಾಗಿದೆ. ಈ ಬಾರಿ ಮಳೆ ಅತೀ ಅಗತ್ಯವಾಗಿದ್ದು, ಮಳೆಯಿಂದಲೇ ದೇಶದ ಬೆಳೆಯ ಭವಿಷ್ಯ ಅಡಗಿದೆ. ಈಗಾಗಲೇ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿರುವುದರಿಂದ ಮಳೆ ಬಂದರೆ ಬೆಳೆಯೂ ವೃದ್ಧಿಯಾಗಿ ಬೆಲೆ ಏರಿಕೆಯನ್ನು ಕೊಂಚ ಕೆಳಗಿಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ದೇಶದ ಬೆನ್ನೆಲುಬಾದ ರೈತನಿಗೆ ಈ ಬಾರಿಯ ಮಳೆ ಅತ್ಯಂತ ಮುಖ್ಯವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ