ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 25 ಪಾಕಿಸ್ತಾನಿ ಉಗ್ರಗಾಮಿಗಳ ಬಿಡುಗಡೆ, ಮರಳಿ ಪಾಕಿಸ್ತಾನಕ್ಕೆ (Pakistani | Militants | Terror)
Bookmark and Share Feedback Print
 
ಜಮ್ಮು ಕಾಶ್ಮೀರ ಸರ್ಕಾರ ಇದೀಗ 25 ಪಾಕಿಸ್ತಾನಿ ಉಗ್ರಗಾಮಿಗಳನ್ನು ಜೈಲುವಾಸದಿಂದ ಬಿಡುಗಡೆ ಮಾಡಿದ್ದು, ತಮ್ಮ ದೇಶಗಳಿಗೆ ಮರಳಲು ಸೂಚನೆ ನೀಡಿದೆ.

ಗುರುವಾರ ತಡರಾತ್ರಿ ಜಮ್ಮು ಕಾಶ್ಮೀರ ಸರ್ಕಾರದ ಗೃಹ ಸಚಿವಾಲಯ ಹೊರಡಿಸಿದ ಈ ಬಿಡುಗಡೆ ಆದೇಶದಲ್ಲಿ 25 ಪಾಕಿಸ್ತಾನಿ ಉಗ್ರರನ್ನು ಬಿಡುಗಡೆ ಮಾಡಿ ಎಂದಿದೆ.

ಸಾರ್ವಜನಿಕ ರಕ್ಷಣಾ ಕಾಯಿದೆಯ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಪಂಜಾಬ್‌ನ ವಾಝಾ ಗಡಿಗೆ ಬಿಡಲಾಗುತ್ತಿದೆ. ನಂತರ ಅವರು ತಮ್ಮ ದೇಶಕ್ಕೆ ಅವರು ಮರಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದೆರಡು ತಿಂಗಳುಗಳಿಂದಲೇ ಈ 25 ಮಂದಿಯನ್ನು ಬಿಡುಗಡೆ ಮಾಡಲು ಪ್ರಯತ್ನ ಆರಂಭವಾಗಿತ್ತು. ಮಾನವ ಹಕ್ಕು ಪ್ರತಿಪಾದಕರ ಟೀಕೆಗಳು ಹೆಚ್ಚಾದ್ದರಿಂದ ಈ ಮಂದಿಯನ್ನು ಬಿಡುಗಡೆಗೆ ಚಾಲನೆ ನೀಡಲಾಗಿತ್ತು.

ವಾಝಾ ಗಡಿ ಪ್ರದೇಶದ ಪಾಕಿಸ್ತಾನಿ ಅಧಿಕಾರಿಗಳ ಕೈಗೆ ಈ ಉಗ್ರವಾದಿಗಳನ್ನು ಒಪ್ಪಿಸಲಾಗಿದ್ದು, ಇವರನ್ನು ಕಳೆದ ಒಂದು ವರ್ಷಕ್ಕೂ ಮೊದಲು ಬಂಧಿಸಲಾಗಿತ್ತು. ಈ 25 ಮಂದಿಗಳ ಪೈಕಿ ಕೆಲವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆ ಹೊಂದಿದ್ದರೂ, ಬಾರೀ ಪ್ರಕರಣಗಳ್ಲಲಿ ಭಾಗಿಯಾಗಿರದೆ, ಸಣ್ಣಪುಟ್ಟ ಕ್ರಿಮಿನಲ್ ಚಟುವಟಿಕೆಗಳ್ಲಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ