ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಧುವಿನ ಸ್ಟಿಂಗ್ ಆಪರೇಷನ್: ಭಾವಿ ವರ, ಮಾವ ಜೈಲಿಗೆ! (sting operation | spy cameras | Mulund police | demands of dowry)
Bookmark and Share Feedback Print
 
ಐಎಎಸ್, ಐಪಿಎಸ್ ಅಧಿಕಾರಿಗಳು, ಸೇನಾಧಿಕಾರಿಗಳು, ಕಾಮಿಸ್ವಾಮಿ, ರಾಜಕಾರಣಿಗಳ ವಿರುದ್ಧ ಮಾಧ್ಯಮಗಳು ಸ್ಟಿಂಗ್ ಆಪರೇಷನ್ ನಡೆಸುತ್ತಿದ್ದ ವಿಷಯ ಕೇಳಿದ್ದೀರಿ. ಆದರೆ ಇನ್ಮುಂದೆ ಹುಷಾರಾಗಿರಿ...ಸ್ವತಃ ವಧುವೇ ಸ್ಟಿಂಗ್ ಆಪರೇಶನ್ ನಡೆಸುವ ಮೂಲಕ ಹೆಚ್ಚಿನ ವರದಕ್ಷಿಣೆ ಕೇಳಿದ ಭಾವಿ ಗಂಡ ಹಾಗೂ ಮಾವನನ್ನು ಜೈಲಿಗೆ ತಳ್ಳಿರುವ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ!

ಸ್ಟಿಂಗ್ ಆಪರೇಷನ್ ಮಾಡಿದ್ದು ವಧು!: ಮುಂಬೈನ ಮುಲುಂಡ್ ಹೊರವಲಯದ 30ರ ಹರೆಯದ ಯುವತಿ ಅಖಿಲೇಶ್ ಪಾಠಕ್ ಎಂಬಾತನ ಜೊತೆ ವಿವಾಹ ನಿಶ್ಚಯವಾಗಿತ್ತು. ಈಗಾಗಲೇ ಅಖಿಲೇಷ್‌ಗೆ 4 ಲಕ್ಷ ರೂಪಾಯಿ ವರದಕ್ಷಿಣೆ ಯುವತಿಯ ತಂದೆ ನೀಡಿದ್ದರು. ಆದರೆ ಕೆಲವು ದಿನದ ನಂತರ ಹುಡುಗನ ಮನೆಯವರು ತಮಗೆ ಸ್ವಿಫ್ಟ್ ಕಾರು ಮತ್ತು ಪೀಠೋಪಕರಣವನ್ನು ಹೆಚ್ಚುವರಿಯಾಗಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.

ಈ ರೀತಿ ಬೇಡಿಕೆ ಬಂದಾಗ ವಧುವಿನ ತಲೆಯೊಳಗೆ ಬಂದಿದ್ದೇ ಸ್ಟಿಂಗ್ ಆಪರೇಶನ್ ಐಡಿಯಾ!.ಅದಕ್ಕಾಗಿ ಮೂರು ರಹಸ್ಯ ಕ್ಯಾಮರ ತೆಗೆದುಕೊಂಡು ವರನ ಮನೆಗೆ ಹೋಗಿ, ಕೊಡಬೇಕಾಗಿದ್ದ ಹೆಚ್ಚುವರಿ ವರದಕ್ಷಿಣೆ ಬಗ್ಗೆ ಸುಮಾರು 3ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಆದರೆ ಈ ಮಾತುಕತೆಗಳೆಲ್ಲ ವಧು ಮತ್ತು ಆಕೆಯ ಸಹೋದರ ರೆಕಾರ್ಡಿಂಗ್ ಮಾಡಿಕೊಂಡಿದ್ದರು.

ವರದಕ್ಷಿಣೆ ಬೇಡಿಕೆ ಮತ್ತು ಮಾನಸಿಕ ಕಿರುಕುಳ ನೀಡಿದ ಸಂಪೂರ್ಣ ವೀಡಿಯೋ ಚಿತ್ರಣವನ್ನು ಕೂಡಲೇ ಪೊಲೀಸರಿಗೆ ಒಪ್ಪಿಸಿ, ದೂರು ದಾಖಲಿದ್ದರು. ಆ ನಿಟ್ಟಿನಲ್ಲಿ ಮುಲುಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವರ ಅಖಿಲೇಷ್ ಮತ್ತು ಆತನ ತಂದೆ ಸುರೇಶ್ ದತ್ತ ಪಾಠಕ್‌ನನ್ನು ಬಂಧಿಸಿದ್ದಾರೆ.

ಮುಲುಂಡ್ ಕಾಲೋನಿಯ 30ರ ಹರೆಯದ ಯುವತಿ ಕಾಲ್ ಸೆಂಟರ್‌ನ ಉದ್ಯೋಗಿಯಾಗಿದ್ದು, ನವಿ ಮುಂಬೈನ ವರ ಅಖಿಲೇಷ್ ಪಾಠಕ್ ಜೊತೆ ಜೂನ್ 19ಕ್ಕೆ ಮದುವೆ ಎಂದು ನಿಶ್ಚಯಿಸಿ, ಆಮಂತ್ರಣ ಪತ್ರಿಕೆ ಮುದ್ರಿಸಿ ನೂರರಷ್ಟು ಹಂಚಲಾಗಿತ್ತು. ಮದುವೆಗೂ ಮುನ್ನ ನಡೆದ ಎರಡು ಸಮಾರಂಭದಲ್ಲಿ ವಧುವಿನ ಕಡೆಯವರು ವರನಿಗೆ ಸುಮಾರು ನಾಲ್ಕು ಲಕ್ಷ ರೂಪಾಯಿಯಷ್ಟು ಉಡುಗೊರೆಯನ್ನು ನೀಡಿದ್ದರು. ಕೆಲವು ದಿನದ ನಂತರ ನಿಶ್ಚಿತಾರ್ಥ(ಉಂಗುರು ವಿನಿಮಯ) ಸಮಾರಂಭ ಮಾಡಬೇಕೆಂದು ಹಠ ಹಿಡಿದಿದ್ದ. ಆ ಸಂದರ್ಭದಲ್ಲಿಯೂ 1ಲಕ್ಷ ರೂಪಾಯಿ ಉಡುಗೊರೆ ನೀಡಲಾಗಿತ್ತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಆದರೆ ನಾವು ವಧುವಿನ ಕಡೆಯವರಿಗೆ ವರದಕ್ಷಿಣೆ ನೀಡುವಂತೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ವರನ ತಂದೆ ಸುರೇಶ್ ದತ್ತ ತಿಳಿಸಿದ್ದು, ತಾವು ಮದುವೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ವಿದ್ಯಾವಂತ ಯುವಕರೇ ಈ ರೀತಿಯಾಗಿ ವರದಕ್ಷಿಣೆ ಆಸೆಯಿಂದ ಯುವತಿಯರನ್ನು ಗೋಳುಹೊಯ್ದುಕೊಳ್ಳುತ್ತಿರುವ ಇಂತಹ ಜನರಿಗೆ ಬುದ್ದಿ ಕಲಿಸಬೇಕೆಂದೇ ತಾನು ಸ್ಟಿಂಗ್ ಆಪರೇಷನ್ ನಡೆಸಿರುವುದಾಗಿ ವಧು ಅಭಿಪ್ರಾಯವ್ಯಕ್ತಪಡಿಸಿದ್ದು, ತಾನು ಆತನ ಜೊತೆ ಮದುವೆಯಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಯೋಚಿಸಿ ಈ ನಿರ್ಧಾರ ತಳೆದಿರುವುದಾಗಿ ಹೇಳಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ