ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಲ್ಟಾ ಹೊಡೆದ ಜಯಾಬಚ್ಚನ್: ರಾಜ್ಯಸಭೆಗೆ ಸ್ಪರ್ಧಿಸಲಾರೆ! (Rajya Sabha | Jaya Bachchan | Mulayam Sing | Amitabh Bachchan)
Bookmark and Share Feedback Print
 
PTI
ಅಚ್ಚರಿಕರ ಬೆಳವಣಿಗೆ ಎಂಬಂತೆ ಎರಡನೇ ಅವಧಿಗೆ ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಬೇಡಿಕೆಯನ್ನು ದಿಢೀರನೆ ತಿರಸ್ಕರಿಸುವ ಮೂಲಕ ಸಮಾಜವಾದಿ ಪಕ್ಷಕ್ಕೆ ಆಘಾತ ತಂದಿದ್ದು, ಇದೀಗ ರಾಜ್ಯಸಭೆಗೆ ಪಕ್ಷದ ರಾಷ್ಟ್ರೀಯ ವಕ್ತಾರ ಮೋಹನ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ಘೋಷಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಎರಡನೇ ಅವಧಿಗೆ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿದ್ದ ಸಮಾಜವಾದಿ ಪಕ್ಷದ ಬೇಡಿಕೆಯನ್ನು ಜಯಾಬಚ್ಚನ್ ತಿರಸ್ಕರಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಕುಟುಂಬದ ಕಾರಣದಿಂದಾಗಿ ತಾನು ಸಮಾಜವಾದಿ ಪಕ್ಷದಿಂದ ಮತ್ತೆ ರಾಜ್ಯಸಭಾ ಸದಸ್ಯೆಯಾಗಲಾರೆ ಎಂದು ಸ್ಪಷ್ಟಪಡಿಸಿರುವುದಾಗಿ ಜಯಾ ತಿಳಿಸಿದ್ದರು.

ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು, ಜಯಾಬಚ್ಚನ್ ಸಮಾಜವಾದಿ ಪಕ್ಷದಿಂದ ಎರಡನೇ ಬಾರಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡುವ ಇಂಗಿತ ವ್ಯಕ್ತಪಡಿಸಿದಾಗ, ಅದನ್ನು ಜಯಾ ಒಪ್ಪಿದ್ದರು. ಆದರೆ ಜಯಾ ದಿಢೀರನೆ ಪಕ್ಷದ ಆಹ್ವಾನವನ್ನು ತಿರಸ್ಕರಿಸಿ ಪಕ್ಷದ ಮುಖಂಡರಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ.

ಕೊನೆಗೂ ಆಪ್ತಮಿತ್ರನನ್ನು ಮೂಲೆಗುಂಪು ಮಾಡದ ಬಚ್ಚನ್ ಕುಟುಂಬ: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಎಂದು ಹೇಳಿಕೆ ನೀಡಿ ಜಯಾ ಬಚ್ಚನ್, ಕುಟುಂಬದ ಆಪ್ತಮಿತ್ರರಾಗಿದ್ದ ಅಮರ್ ಸಿಂಗ್ ಅವರನ್ನು ವಿರೋಧಿಸಿ ಸಮಾಜವಾದಿ ಪಕ್ಷದ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆಂಬ ನಂಬಿಕೆ ಹುಸಿಯಾಗಿದೆ. ಜಯಾ ಬಚ್ಚನ್ ಅವರನ್ನು ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಸಮಾಜವಾದಿ ಪಕ್ಷ ಮುಂದಾದ ಬೆನ್ನಲ್ಲೇ, ಅಮರ್ ಸಿಂಗ್ ಜಯಾ ಪತಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಅಮಿತಾಭ್ ಹಾಗೂ ಅಮರ್ ಸಿಂಗ್ ಮಾತುಕತೆಯ ನಂತರ ಜಯಾಬಚ್ಚನ್ ಉಲ್ಟಾ ಹೊಡೆದಿದ್ದಾರೆ. ಅಮರ್ ಸಿಂಗ್ ಮತ್ತು ಮುಲಾಯಂ ಸಿಂಗ್ ಬಹುಕಾಲದ ಮಿತ್ರರಾಗಿದ್ದರು ಕೂಡ ಮುಲಾಯಂ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಆ ಸಂದರ್ಭದಲ್ಲಿ ಜಯಾ ಬಚ್ಚನ್ ಕೂಡ ಸಮಾಜವಾದಿ ಪಕ್ಷದಿಂದ ಹೊರಬರುತ್ತಾರೆಂಬ ಊಹಾಪೋಹ ಎದ್ದಿತ್ತು. ಆದರೆ ಕೊನೆಗೂ ಕುಟುಂಬದ ನಿಕಟವರ್ತಿ ಅಮರ್ ಸಿಂಗ್ ಅವರನ್ನು ಬಿಟ್ಟುಕೊಡದ ಜಯಾಬಚ್ಚನ್, ಸಮಾಜವಾದಿ ಪಕ್ಷದ ಆಹ್ವಾನ ತಿರಸ್ಕರಿಸಿದ್ದು, ಮುಲಾಯಂ ಸಿಂಗ್ ಯಾದವ್ ಮುಖಭಂಗಕ್ಕೊಳಗಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ