ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾತ್ರಿ ರೈಲು ಸಂಚಾರ ಸ್ಥಗಿತ (Black Week | Howrah Station | Maoist | India)
Bookmark and Share Feedback Print
 
ಶುಕ್ರವಾರದ ನಕ್ಸಲ್ ಆಕ್ರಮಣದ ಬೆನ್ನಲ್ಲೇ ನಕ್ಸಲ್ ಪೀಡಿತ ಪ್ರದೇಶವಾದ ಹೌರಾದಲ್ಲಿ ರಾತ್ರಿ ರೈಲು ಸಂಚಾರವನ್ನು ರೈಲ್ವೇ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲ್ ಜೂನ್ 3ರ ವರೆಗೆ 'ಬ್ಲ್ಯಾಕ್ ವೀಕ್' ಆಚರಿಸುವ ಹಿನ್ನಲೆಯಲ್ಲಿ ರಾತ್ರಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಹೌರಾ ಸ್ಟೇಷನ್‌ನಿಂದ ರಾತ್ರಿ ಹೊರಡುವ ಎಲ್ಲಾ ಐದು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದ್ದು, ಮರುದಿನ ಬೆಳಗ್ಗೆ ನಿರ್ಗಮಿಸಲಿದೆ.

ಪ್ರಯಾಣಿಕರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಪೂರ್ವ ರೈಲ್ವೇ ವಕ್ತಾರ ತಿಳಿಸಿದ್ದಾರೆ.

ಇದರೊಂದಿಗೆ 2810 ಹೌರಾ-ಮುಂಬೈ, 2152 ಸಮರ್‌ಸಾಟಾ ಎಕ್ಸ್‌ಪ್ರೆಸ್, 2130 ಅಜಾದ್ ಹಿಂದ್ ಎಕ್ಸ್‌ಪ್ರೆಸ್, 2906 ಫೋರ್‌ಬಂಧರ್ ಎಕ್ಸ್‌ಪ್ರೆಸ್ ಮತ್ತು 2834 ಅಹಮದಾಬಾದ್ ಎಕ್ಸ್‌ಪ್ರೆಸ್ ವೇಳಾಪಟ್ಟಿಯಲ್ಲಿ ಬದವಾವಣೆಯುಂಟಾಗಿದೆ.

ಅದೇ ವೇಳೆ ಪಶ್ಚಿಮ ಬಂಗಾಳ ಸೇರಿದಂತೆ ನಕ್ಸಲ್ ಪೀಡಿತ ಇತರ ರಾಜ್ಯಗಳಾದ ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್‌ಗಡಗಳಲ್ಲಿಯೂ ರಾತ್ರಿ ರೈಲು ಸಂಚಾರ ಸ್ಥಗಿತಗೊಳ್ಳುವ ಕುರಿತಂತೆ ಚಿಂತನೆ ಮುಂದುವರಿದಿದೆ.

ಈ ಬಗ್ಗೆ ರೈಲ್ವೇ ಮಂಡಳಿ ಸದಸ್ಯ ವಿವೇಕ್ ಸಹಾಯ್ ತಿಳಿಸಿದ್ದು, ಶೀಫ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಐದು ರಾಜ್ಯಗಳಲ್ಲಿ ಕೆಂಪು ಉಗ್ರರು ಕರಾಳ ಸಪ್ತಾಹವನ್ನು (ಬ್ಲ್ಯಾಕ್ ವೀಕ್) ಆಚರಿಸುತ್ತಿರುವುದು ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಹೆಚ್ಚಿನ ನಕ್ಸಲ್ ದಾಳಿಗಳ ಸಾಧ್ಯತೆಯಿದೆಯೆಂದು ಗುಪ್ತಚರ ಇಲಾಖೆ ವರದಿ ಮಾಡಿವೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ