ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಎಸ್ಐಗೆ ಮಾಹಿತಿ: ಗುಪ್ತಾಗೆ ಇನ್ನೂ 14 ದಿನ ನ್ಯಾಯಾಂಗ ಬಂಧನ (Madhuri Gupta | judicial custody | Diplomat spy | Pakistan)
Bookmark and Share Feedback Print
 
ಪಾಕಿಸ್ತಾನದ ಗುಪ್ತಚರ ಇಲಾಖೆಗೆ ದೇಶದ ರಹಸ್ಯಗಳನ್ನು ಹಸ್ತಾಂತರಿಸಿದ ಆಪಾದನೆಯಲ್ಲಿ ಬಂಧನದಲ್ಲಿರುವ ರಾಜತಾಂತ್ರಿಕ ಅಧಿಕಾರಿ ಮಾಧುರಿ ಗುಪ್ತಾ ಅವರ ನ್ಯಾಯಾಂಗ ಬಂಧನದ ಇನ್ನೂ 14ದಿನಗಳ ಕಾಲಾವಧಿಯವರೆಗೆ ವಿಸ್ತರಿಸಲಾಗಿದೆ.

53ರ ಹರೆಯದ ಗುಪ್ತಾರನ್ನು ದೇಶದ್ರೋಹದ ಆರೋಪದ ಮೇಲೆ ಏಪ್ರಿಲ್ 22ರಂದು ಪಾಕಿಸ್ತಾನದಿಂದ ದೆಹಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದರು.

ಏತನ್ಮಧ್ಯೆ, ಬಂಧನದಲ್ಲಿರುವ ಗುಪ್ತಾ ಜಾಮೀನು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಮೇ 21ರಂದು ತಿರಸ್ಕರಿಸಿತ್ತು. ಅಲ್ಲದೇ ಇದೊಂದು ಗಂಭೀರವಾದ ಪ್ರಕರಣವಾಗಿದ್ದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತ್ತು.

ತಾನು ಯಾವುದೇ ವಿಧದಲ್ಲೂ ಕಾನೂನಿನ ಕಣ್ಣಿಗೆ ಮಣ್ಣಿರಚಿ ನಾಪತ್ತೆಯಾಗುವುದಿಲ್ಲ, ತಾನು ದೆಹಲಿಯ ಖಾಯಂ ನಿವಾಸಿಯಾಗಿದ್ದು, ತನಗೆ ಜಾಮೀನು ನೀಡಬೇಕೆಂದು ಗುಪ್ತಾ ಮನವಿಯಲ್ಲಿ ತಿಳಿಸಿದ್ದರು. ಆದರೂ ಗುಪ್ತಾ ಪರ ವಕೀಲರ ವಾದವನ್ನು ಆಲಿಸಿದ ಕೋರ್ಟ್ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಗುಪ್ತಾ ಅವರ ಪ್ರಕರಣ ತನಿಖೆಯ ಹಂತದಲ್ಲಿದ್ದು, ಈಗಾಗಲೇ ಗುಪ್ತಾಗೆ ಜಾಮೀನು ನೀಡಬಾರದು ಎಂದು ಸರ್ಕಾರಿ ಪರ ವಕೀಲರಾದ ರೀಟಾ ಶರ್ಮಾ ಕೋರ್ಟ್‌ಗೆ ಮನವರಿಕೆ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ