ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಳಹಸ್ತಿ ಗೋಪುರ ಅವಶೇಷಗಳಡಿಯಲ್ಲಿ ಶವ ಪತ್ತೆ! (Kalahasthi Temple | Andhra Pradesh)
Bookmark and Share Feedback Print
 
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುರಾಣ ಪ್ರಸಿದ್ಧ 500 ವರ್ಷಗಳಿಗೂ ಹಳೆಯ ಶ್ರೀಕಾಳಹಸ್ತಿ ಶಿವ ದೇವಾಲಯದ ರಾಜ ಗೋಪುರ ಕುಸಿತದ ಘಟನೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕುಸಿದು ಬಿದ್ದಿರುವ ಗೋಪುರದ ಅವಸೇಷಗಳಲ್ಲಿ ಹೊರತೆಗೆಯುತ್ತಿರುವ ಸಂದರ್ಭ 40 ವರ್ಷ ಹರೆಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಗೋಪುರ ಕುಸಿದು ಮೂರು ದಿನಗಳ ನಂತರ ಅಂದರೆ ಶನಿವಾರ ಈ ಶವ ಹೊರತೆಗೆಯಲಾಗಿದೆ.

ಮೃತನನ್ನು ಇಲ್ಲಿನ ಚಿಕ್ಕ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜಾ ಎಂಬಾತನ ಶವ ಎಂದು ಗುರುತಿಸಲಾಗಿದ್ದು, ಇವರು ಈಂಧ್ರದ ನೆಲ್ಲೂರು ಜಿಲ್ಲೆಯ ಪೆಲ್ಲಕ್ಕೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಗೋಪುರ ಬಿರುಕು ಬಿಡುತ್ತಿದ್ದಂತೆಯೇ 50 ಮೀಟರ್ ಅಂತರದಲ್ಲಿ ಗುರುತು ಹಾಕಲಾಗಿದ್ದ ಅಪಾಯಕಾರಿ ಸ್ಥಳದಲ್ಲೇ ಈ ಶವ ಪತ್ತೆಯಾಗಿದೆ ಎಂದು ಚಿತ್ತೂ ರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮಕೃಷ್ಣ ಹೇಳಿದ್ದಾರೆ.

ಗೋಪುರ ಬಿರುಕು ಬಿಡುತ್ತಿದ್ದಂತೆಯೇ ಸುತ್ತಮುತ್ತಲಿನ ಎಲ್ಲಾ ಅಂಗಡಿಗಲು ಹಾಗೂ ಹೊಟೇಲುಗಳನ್ನು ತೆರವುಗೊಳಿಸಲಾಗಿತ್ತು. ಆದರೆ ರಾಜಾ ಮಾತ್ರ ಅಲ್ಲೇ ವಾಸವಾಗಿದ್ದರೂ, ಅದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ