ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ: ಪ್ರಫುಲ್ ಪಟೇಲ್ (Praful Patel | Mangalore airport | Civil Aviation)
Bookmark and Share Feedback Print
 
ಮಂಗಳೂರು ವಿಮಾನ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಇದೀಗ ತನ್ನ ವಿಮಾನ ನಿಲ್ದಾಣಗಳ ಪರಾಮರ್ಶೆಯಲ್ಲಿ ತೊಡಗಿದೆ. ಪರಿಣಾಮವಾಗಿ ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಉದ್ದವನ್ನು ಈಗಿರುವ 8,000 ಅಡಿಗಳಿಗಿಂದ 9,000 ಅಡಿಗಳಿಗೆ ಹೆಚ್ಚಿಸುವ ನಿರ್ಧಾರ ಹೊರಬಿದ್ದಿದೆ.

ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಸ್ವತಃ ಈ ಹೇಳಿಕೆ ನೀಡಿದ್ದು, ಮಂಗಳೂರಿನ ವಿಮಾನ ನಿಲ್ದಾಣದ ರನ್ ವೇ ಉದ್ದವನ್ನು 9,000 ಅಡಿಗಳಿಗೆ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳೂರು ವಿಮಾನ ದುರಂತ ಅತ್ಯಂದ ಭೀಕರ ಘಟನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದೆ ವಿಮಾನ ನಿಲ್ದಾಣಗಳಿಗೆ ಅಗತ್ಯ ಸೌಲಭ್ಯಗಳನ್ನು ಹೆಚ್ಚಿಸುವ ಅಥವಾ ಇನ್ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸದಾ ಸಲಹೆಗಳನ್ನು ಸ್ವೀಕರಿಸಲಿದೆ ಎಂದಿದ್ದಾರೆ.

ನಾನು ವಿಮಾನ ನಿಲ್ದಾಣಗಳನ್ನು ತಾಂತ್ರಿಕವಾಗಿ ವಿಶ್ಲೇಷಿಸಬಲ್ಲ ತಜ್ಞನಲ್ಲವಾದರೂ, ಕೇವಲ ಮಂಗಳೂರು ವಿಮಾನ ನಿಲ್ದಾಣವಲ್ಲದೆ, ಭಾರತದ ಯಾವುದೇ ವಿಮಾನ ನಿಲ್ದಾಣಗಳಿಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದೆ ಎಂದರು.

ಈ ದುರಂತದಿಂದ ಇಲಾಖೆ ಬಹುದೊಡ್ಡ ಪಾಠ ಕಲಿತಿದೆ. ಸದ್ಯದಲ್ಲೇ ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಮುಂದಿನ ಸುಧಾರಣೆಗಳ ಕುರಿತು ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭ ಭಾರತೀಯ ವಿಮಾನಯಾನವು ನಿಜಕ್ಕೂ ಸೇಫ್ ಆಗಿದ್ದು, ಶೇ.100ರಷ್ಟು ಸೇಫ್ ಅಥವಾ ಶೇ.ಸೊನ್ನೆಯಷ್ಟು ಎಂದು ಹೇಳಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ