ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲು ದುರಂತ: ಸಾರಿ, ತಪ್ಪಾಗಿದೆ ಎಂದ ಮಾವೋವಾದಿ! (Naxal | Maoist | Terror | Train Tragedy | Jnashewari)
Bookmark and Share Feedback Print
 
150ಕ್ಕೂ ಹೆಚ್ಚು ಮುಗ್ಧ ಪ್ರಯಾಣಿಕರನ್ನು ರೈಲು ದುರಂತದ ಮೂಲಕ ಕೊಲೆಗೈದ ನಕ್ಸಲರೀಗ, ದೇಶವ್ಯಾಪಿಯಾಗಿ ಬರುತ್ತಿರುವ ಖಂಡನೆಗಳಿಂದ ಕಂಗೆಟ್ಟು, ಮುಖ ಉಳಿಸಿಕೊಳ್ಳಲೋ ಎಂಬಂತೆ ಪ್ರತಿಕ್ರಿಯೆ ನೀಡಿದ್ದು, 'ಸಾರಿಸ ಪ್ರಯಾಣಿಕರ ರೈಲನ್ನು ಗುರಿಯಾಗಿರಿಸಿದ್ದು ತಪ್ಪಾಗಿದೆ' ಎಂದಿದೆ.

ತಿಪ್ಪರಲಾಗ
ಆದರೆ, ಈ ವಿಧ್ವಂಸಕ ಕೃತ್ಯದ ರೂವಾರಿ ಎಂದು ಬಾಪಿ ಮಹತೋನನ್ನು ಘೋಷಿಸಿದ ಬಳಿಕ ಪುನಃ ಸಂಪರ್ಕಿಸಿದಾಗ, ದಾಳಿಯಲ್ಲಿ ತನ್ನ ಪಾತ್ರ ಇಲ್ಲವೇ ಇಲ್ಲ ಎಂದೂ ಪ್ರತಿಕ್ರಿಯಿಸಿದ್ದಾನೆ!
ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಸಂಬಂಧಿಸಿ ಪ್ರಧಾನ ಆರೋಪಿ ಗುರುತಿಸಲ್ಪಡುವ ಕೆಲವೇ ಕ್ಷಣಗಳ ಹಿಂದೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ್ದ ಮಾವೋವಾದಿ ಸಂಘಟನೆ ಪಿಸಿಪಿಎ (ಪೀಪಲ್ಸ್ ಕಮಿಟೀ ಅಗೇನ್‌ಸ್ಟ್ ಪೊಲೀಸ್ ಅಟ್ರಾಸಿಟೀಸ್) ನಾಯಕ ಬಾಪಿ ಮಹತೋ, "ಕ್ಷಮಿಸಿ, ಈ ಮುಗ್ಧ ನಾಗರಿಕರು ಸಾಯಬೇಕೆಂದು ನಾವೆಂದಿಗೂ ಬಯಸಿರಲಿಲ್ಲ. ನನ್ನನ್ನು ನಂಬಿ. ನಾವು ಗುರಿ ಇಟ್ಟದ್ದು ಗೂಡ್ಸ್ ರೈಲಿಗೆ. ಆದರೆ, ಗೂಡ್ಸ್ ರೈಲು ಇದೇ ಹಳಿಯಲ್ಲಿ ಬರುತ್ತದೆ ಎಂದು ನಮಗೆ ತಪ್ಪು ಮಾಹಿತಿ ದೊರೆತಿತ್ತು. ಹೀಗಾಗಿ ನಾವು ಪಾಂಡ್ರಲ್ ಕ್ಲಿಪ್‌ಗಳನ್ನು ಕಿತ್ತು ಹಳಿಯನ್ನು ಬೇರ್ಪಡಿಸಿ, ರೈಲು ಹಳಿ ತಪ್ಪುವಂತೆ ಮಾಡಿದ್ದೆವು. ತಪ್ಪು ಲೆಕ್ಕಾಚಾರದಿಂದಾಗಿ ನಾಗರಿಕರು ಸಾಯಬೇಕಾಯಿತು" ಎಂದು ಹೇಳಿಕೆ ನೀಡಿದ್ದ.

ಆದರೆ, ಶುಕ್ರವಾರ ನಸುಕಿಗೆ ಮುಂಚೆ ನಡೆದ ಈ ವಿಧ್ವಂಸಕ ಕೃತ್ಯದ ರೂವಾರಿ ಎಂದು ಹೆಸರಿಸಲಾದ ಬಳಿಕ ಮಹತೋನನ್ನು ಎಕ್ಸ್‌ಪ್ರೆಸ್ ಪುನಃ ಸಂಪರ್ಕಿಸಿದಾಗ, ದಾಳಿಯಲ್ಲಿ ತನ್ನ ಪಾತ್ರ ಇಲ್ಲವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾನೆ!

* ಅಪ್ಪಿಕೊಂಡೇ ಇಹಲೋಕ ಯಾತ್ರೆ ಮುಗಿಸಿದ ಅವಳಿ ಪುಟಾಣಿಗಳು ಕ್ಲಿಕ್ ಮಾಡಿ.
* ನಕ್ಸಲರ ವಿರುದ್ಧ ಯುಪಿಎ ಕೈ ಕಟ್ಟಿಹಾಕಿದರೇ ಮಮತಾ? ಇಲ್ಲಿ ಕ್ಲಿಕ್ ಮಾಡಿ.

ನಮ್ಮನ್ನು ಸಿಪಿಎಂ ಮತ್ತು ಪೊಲೀಸರು ಸುಮ್ಮನೆ ಕೇಸಿನಲ್ಲಿ ಸಿಲುಕಿಸುತ್ತಿದ್ದಾರೆ. ನಾನೇ ತನಿಖೆ ನಡೆಸಿ, ಈ ಘಟನೆಯಲ್ಲಿ ನಮ್ಮ ಕಾರ್ಯಕರ್ತರು ಭಾಗಿಯಾಗಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ. ಈ ಘಟನೆಯ ಹಿಂದೆ ಪತ್ತೂರಿ ಮತ್ತು ಕೋಸ್ತುಶೋಲ್‌ನ ಸಿಪಿಎಂ ಗೂಂಡಾಗಳಾದ ಅರ್ಜುನ್ ಮಹತೋ ಮತ್ತು ಲೊಲಿತ್ ಸಾಹೂ ಅವರ ಕೈವಾಡವಿರುವುದು ದೃಢಪಟ್ಟಿದೆ. ಈ ಘಟನೆ ನಡೆದ ಹಿಂದಿನ ರಾತ್ರಿ ಬಂಗಾಳದ ಸಿಪಿಎಂ ಸಚಿವರೊಬ್ಬರು ಬಾರ್ಜುಡಿ ಶಾಲೆಯಲ್ಲಿ ಸಭೆ ನಡೆಸಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾನೆ.

ಅಲ್ಲದೆ, ಮಾವೋವಾದಿಗಳ ಸೆಲ್‌ಫೋನ್ ಮಾತುಕತೆಯ ಕದ್ದಾಲಿಕೆ ವೇಳೆ ತಿಳಿದುಬಂದ ಅಂಶದ ಪ್ರಕಾರ, ಜಾರ್‌ಗ್ರಾಮದ 12 ಜನ ಮಾವೋವಾದಿಗಳ ತಂಡವು 15ರ ಹರೆಯದ ಕಾನು ಎಂಬಾತನ ನೇತೃತ್ವದಲ್ಲಿ ಮತ್ತು ಸ್ಥಳೀಯ ಪಿಸಿಪಿಎ ಕಾರ್ಯಕರ್ತರು ಹಾಗೂ ಸ್ಥಳೀಯರ ಸಹಕಾರರೊಂದಿಗೆ ಪಾಂಡ್ರಲ್ ಕ್ಲಿಪ್‌ಗಳನ್ನು ತೆಗೆದಿತ್ತು.

ಸ್ಥಳದಲ್ಲಿ ಸ್ಫೋಟದ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಈಗ ಸ್ಪಷ್ಟಪಡಿಸಿದ್ದಾರೆ.

ಬಾಪಿ ಮಹತೋ ಪಿಸಿಪಿಎಯ ಗ್ವಿಮಾರ-ಲಾಲ್‌ಗರಿಯಾ ಪಂಚಾಯತ್ ಪ್ರದೇಶ ತಂಡದ ನೇತೃತ್ವ ವಹಿಸಿದ್ದಾನೆ. ಜಾರ್‌ಗ್ರಾಮದ 20 ಹಳ್ಳಿಗಳು ಇವನ ಕಾರ್ಯಕ್ಷೇತ್ರ. ಕಷ್ಟಪಟ್ಟು ಆತನನ್ನು ಪತ್ತೆ ಹಚ್ಚಿ ಆತನೊಂದಿಗೆ ಮಾತುಕತೆ ನಡೆಸಿತ್ತು ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರ ತಂಡ. ಆ ಸಂದರ್ಭ ಆತ, "ನಾವೇನು ಮಾಡುತ್ತಿದ್ದೇವೆಯೋ ಅದಕ್ಕೆಲ್ಲಾ ಸ್ಥಳೀಯರ ಬೆಂಬಲ ಇದ್ದೇ ಇರುತ್ತದೆ. ಅವರೆಲ್ಲ ಭದ್ರತಾ ಪಡೆಗಳ ದೌರ್ಜನ್ಯದಿಂದ ಬೇಸತ್ತಿದ್ದಾರೆ. ಅವರೆಲ್ಲಾ ಕೋಪದಿಂದ ಕುದಿಯುತ್ತಿದ್ದರು" ಎಂದು ಹೇಳಿದ್ದ.

ನಾಗರಿಕರ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಆತ, ಮಾವೋವಾದಿಗಳ ಆಕ್ರೋಶವನ್ನು ಸಮರ್ಥಿಸಿಕೊಂಡಿದ್ದ. 25ರ ಹರೆಯದ ಬಾಪಿ ಹೇಳುವಂತೆ, 10ರ ಪ್ರಾಯದವನಿದ್ದಾಗ, ನೆರೆಮನೆಯ ಮೇಲೆ ನಡೆದ ಬಾಂಬ್ ದಾಳಿಗೆ ಸಂಬಂಧಿಸಿ ಆತನ ತಂದೆಯನ್ನು ಬಂಧಿಸಲಾಯಿತಂತೆ. 2008ರಲ್ಲಿ, ಸಿಆರ್‌ಪಿಎಫ್ ಸೇರಲು ಹೋಗಿದ್ದ ಈತನ ಆಯ್ಕೆಯೂ ಆಗಿತ್ತು. ಆದರೆ ಕೆಲಸ ಬೇಕಿದ್ದರೆ ಭಾರಿ ಮೊತ್ತದ ಹಣ ಕೇಳಲಾಯಿತಂತೆ.
ಸಂಬಂಧಿತ ಮಾಹಿತಿ ಹುಡುಕಿ