ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲ್ವೆ ಹಳಿ ಸ್ಫೋಟ ಪ್ರಕರಣ-ಸಿಬಿಐ ತನಿಖೆ ಇಲ್ಲ: ಪಶ್ಚಿಮಬಂಗಾಳ (Jnaneswari express | WB govt | CBI probe | Mamata Banerjee)
Bookmark and Share Feedback Print
 
ಶಂಕಿತ ಮಾವೋವಾದಿಗಳು ಇತ್ತೀಚೆಗೆ ಮಧ್ಯರಾತ್ರಿ ಎಸಗಿದ ವಿಧ್ವಂಸಕ ಕೃತ್ಯದಲ್ಲಿ ಹಳಿ ತಪ್ಪಿದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 148 ಜನ ಸಾವನ್ನಪ್ಪಿದ್ದರು. ಈ ಘಟನೆ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದನ್ನು ಪಶ್ಚಿಮ ಬಂಗಾಳ ಗೃಹ ಕಾರ್ಯದರ್ಶಿ ಸಮರ್ ಘೋಷ್ ಸೋಮವಾರ ತಳ್ಳಿಹಾಕಿದ್ದಾರೆ.

ಆದರೆ ಈ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದರು. ಘಟನೆ ಕುರಿತಂತೆ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಚಾಲಕ ಬಿ.ಕೆ.ದಾಸ್ ಗವರ್ನಮೆಂಟ್ ರೈಲ್ವೆ ಪೊಲೀಸ್‌ಗೆ ದೂರು ಸಲ್ಲಿಸಿದ್ದಾನೆ. ರೈಲು ಹಳಿ ತಪ್ಪುವ ಮುನ್ನ ಭಾರೀ ಶಬ್ದವೊಂದು ಕೇಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ಅಲ್ಲದೇ ಎಫ್ಐಆರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಎಂದಷ್ಟೇ ನಮೂದಿಸಲಾಗಿದೆ. ದೂರಿನಲ್ಲಿ ಮಾವೋವಾದಿಗಳ ಹೆಸರೇ ನಮೂದಾಗಿಲ್ಲ. ಘಟನೆ ಬಗ್ಗೆ ರೈಲ್ವೆ ಕಾಯ್ದೆಯ ಸೆಕ್ಷನ್ 150. 151ರ ಅಡಿಯಲ್ಲಿ ಪ್ರಕರಣ ದಾಖಲಿಕೊಂಡಿದ್ದಾರೆ.

ರೈಲ್ವೆ ಹಳಿ ತಪ್ಪಿಸಿ ನಡೆಸಿದ ಈ ದುರಂತದ ಹಿಂದೆ ರಾಜಕೀಯ ದುರುದ್ದೇಶ ಇರುವುದಾಗಿಯೂ ಮಮತಾ ಬ್ಯಾನರ್ಜಿ ಗಂಭೀರವಾಗಿ ಆರೋಪಿಸಿದ್ದರು. ಘಟನೆ ಬಗ್ಗೆ ಸತ್ಯಾಂಶ ಹೊರಬರಬೇಕಿದ್ದರೆ ಸಿಬಿಐ ತನಿಖೆ ಅಗತ್ಯ ಎಂದಿದ್ದರು. ಅದೇ ರೀತಿ ಆಲ್ ಇಂಡಿಯಾ ಭಯೋತ್ಪಾದನಾ ನಿಗ್ರಹ ಸಂಸ್ಥೆಯ ವರಿಷ್ಠ ಎಂ.ಎಸ್.ಬಿಟ್ಟಾ ಕೂಡ ಸಿಬಿಐ ತನಿಖೆಗೆ ಆಗ್ರಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ