ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಕೀಯ ಅಸ್ಥಿರತೆ: ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ (Jharkhand | President's rule imposed | Shibu Soren | Farook)
Bookmark and Share Feedback Print
 
ಮುಖ್ಯಮಂತ್ರಿ ಶಿಬು ಸೊರೆನ್ ರಾಜೀನಾಮೆ ಹಿನ್ನೆಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಜಾರ್ಖಂಡ್‌ನಲ್ಲಿ ಪರ್ಯಾಯ ಸರ್ಕಾರ ರಚಿಸಲು ವಿಫಲವಾಗಿದ್ದು, ಕೊನೆಗೂ ನಿರೀಕ್ಷೆಯಂತೆ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.

ಅತಂತ್ರ ರಾಜಕೀಯ ಸ್ಥಿತಿ ಏರ್ಪಟ್ಟ ಪರಿಣಾಮ ಶಿಬು ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ರಾಜ್ಯಪಾಲ ಫಾರೂಕ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬಹುದು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ರವಾನಿಸಿದ್ದರು. ವರದಿ ಆಧಾರದಲ್ಲಿ ಮಂಗಳವಾರ ಬೆಳಿಗ್ಗೆ ಕೇಂದ್ರದ ಕ್ಯಾಬಿನೆಟ್ ಚರ್ಚೆ ನಡೆಸಿ ರಾಷ್ಟ್ರಪತಿ ಆಡಳಿತ ಹೇರಲು ಅನುಮೋದನೆ ನೀಡಿದೆ.

ಭಾನುವಾರ ರಾತ್ರಿ ಶಿಬು ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ಸೋಮವಾರ ರಾಜ್ಯಪಾಲ ಎಂ.ಓ.ಎಚ್.ಫಾರೂಕ್ ಅವರು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಹಾಗೂ ಜಾರ್ಖಂಡ್ ವಿಕಾಸ್ ಮೋರ್ಚಾ-ಪ್ರಜಾತಾಂತ್ರಿಕ್(ಜೆವಿಎಂ-ಪಿ) ಪಕ್ಷಕ್ಕೆ ರಾಜ್ಯದಲ್ಲಿ ಪರ್ಯಾಯ ಸರ್ಕಾರ ರಚನೆಗಾಗಿ ಆಹ್ವಾನ ನೀಡಿದ್ದರು. ಆದರೆ ಸರ್ಕಾರ ರಚಿಸಲು ತಮ್ಮ ಬಳಿ ಬಹುಮತದ ಬೆಂಬಲ ಇಲ್ಲ ಎಂದು ಮೂರು ಪಕ್ಷಗಳು ರಾಜ್ಯಪಾಲರಿಗೆ ತಿಳಿಸಿದ್ದರು.

ಆ ನೆಲೆಯಲ್ಲಿ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿ ಸೋಮವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಕಳುಹಿಸಿದ್ದರು. ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ಯಾವುದೇ ಪಕ್ಷಗಳು ಒಲವು ತೋರಿಲ್ಲ, ಆದ್ದರಿಂದ ಕೇಂದ್ರ ಸರ್ಕಾರ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ವರದಿ ರಾಜ್ಯಪಾಲರು ಅಭಿಪ್ರಾಯವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ