ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಕಾಮ'ನ್‌ವೆಲ್ತ್ ಕ್ರೀಡೆಗೆ ಸಜ್ಜಾಗುತ್ತಿದೆ ದೆಹಲಿ ವೇಶ್ಯಾ ಉದ್ಯಮ! (Commonwealth Games | New Delhi Brothel | GB Road | Sexual Workers)
Bookmark and Share Feedback Print
 
ಪಾನ್ ಬೀಡಾ ಜಗಿದು ಉಗುಳಿದ ಗೋಡೆಗಳಿರುವ ಜಾಗದಲ್ಲಿ ಫ್ಯಾನ್ಸಿ ಟೈಲ್‌ಗಳು ಬರುತ್ತಿವೆ, ಮತ್ತು ಇಂಗ್ಲಿಷ್ ಮಾತನಾಡಲು ಅಲ್ಲಿರುವವರಿಗೆಲ್ಲಾ ತರಬೇತಿ ನೀಡಲಾಗುತ್ತಿದೆ. ಇದ್ಯಾವುದೇ ಜನಕಲ್ಯಾಣ ಕಾರ್ಯಕ್ರಮವಲ್ಲ, ಬದಲಾಗಿ ನವದೆಹಲಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಗಮಿಸುವ ವಿದೇಶೀಯರ ಸ್ವಾಗತಕ್ಕೆ ಅಲ್ಲಿನ ಕೆಂಪುದೀಪ ಪ್ರದೇಶದ ವೇಶ್ಯಾಗೃಹಗಳನ್ನು ಸಜ್ಜುಗೊಳಿಸುತ್ತಿರುವ ಪರಿ!

ವಿಭಿನ್ನ ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುವ ಈ ಮಹಾನ್ ಕೂಟಕ್ಕೆ ಅಧಿಕಾರಿಗಳು ನಗರವನ್ನು ಸಜ್ಜುಗೊಳಿಸುತ್ತಿರುವಂತೆಯೇ, ದೆಹಲಿಯ ಅತ್ಯಂತ ಹಳೆಯ ರೆಡ್ ಲೈಟ್ ಪ್ರದೇಶವಾಗಿರುವ ಜಿ.ಬಿ.ರೋಡ್ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಿದ್ಧಗೊಳಿಸಲು ವೇಶ್ಯಾಗೃಹಗಳ ಒಡೆಯರು ಹಾಗೂ ಸರಕಾರೇತರ ಸಂಸ್ಥೆಗಳು (ಎನ್‌ಜಿಒಗಳು) ಶ್ರಮಿಸಲಾರಂಭಿಸಿದ್ದಾರೆ. ಇವರ ಜಂಟಿ ಪ್ರಯತ್ನಗಳು 84ರಲ್ಲಿ ಹೆಚ್ಚಿನ ವೇಶ್ಯಾಲಯಗಳ ಮೇಲೆ ಪರಿಣಾಮ ಬೀರಿವೆ. ಟೈಲ್ಸ್ ಅಲ್ಲದೆ, ಸ್ಪ್ಲಿಟ್ ಏರ್ ಕಂಡಿಶನರ್‌ಗಳು, ಎಲ್‌ಸಿಡಿ ಟಿವಿಗಳು, ರೆಫ್ರಿಜರೇಟರ್‌ಗಳು ಕೂಡ ಕೆಲವು ವೇಶ್ಯಾಗೃಹಗಳನ್ನು ಅಲಂಕರಿಸಿವೆ. ಸಾವಿರಾರು ವಿದೇಶೀಯರು ರಾಜಧಾನಿಗೆ ಆಗಮಿಸಲಿರುವುದರಿಂದ, ತಮ್ಮ ವ್ಯಾಪಾರವೂ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ವೇಶ್ಯೆಯರು.

ವೇಶ್ಯಾಲಯ ಮಾಲೀಕರು ಹಣ ಕೊಡುತ್ತಿದ್ದಾರೆ, ಜೊತೆಗೆ, ಫೋರ್ಡ್ ಪ್ರತಿಷ್ಠಾನದ ಸಹಯೋಗದಲ್ಲಿ ಲೈಂಗಿಕ ಕಾರ್ಯಕರ್ತರ ರಾಷ್ಟ್ರೀಯ ಜಾಲವು ಕೂಡ ಇದಕ್ಕೆ ನಿಧಿ ಒದಗಿಸುತ್ತಿದೆ.

ವೇಶ್ಯಾಲಯಗಳ ಜಗಮಗಿಸುವಿಕೆ ಹೊರತಾಗಿ, ಆರೋಗ್ಯದತ್ತಲೂ ಕೆಲವು ಸಂಘಟನೆಗಳು ದೃಷ್ಟಿ ಹರಿಸಿವೆ. ಎಚ್‌ಐವಿ ಪಾಸಿಟಿವ್ ಆಗಿರುವವರನ್ನು ಗುರುತಿಸಲು ವಿಶೇಷ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದಲ್ಲದೆ, ಎಚ್ಐವಿ ಪಾಸಿಟಿವ್ ಇರುವ ವಿದೇಶೀಯರಿಗೆ ವೀಸಾ ನೀಡದಂತೆ ಆಗ್ರಹಿಸಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ಆರೋಗ್ಯ ಸಚಿವ ಗುಲಾಂ ನಬಿ ಆಜಾದ್‌ಗೆ ಪತ್ರವನ್ನೂ ಕೆಲವು ಎನ್‌ಜಿಒಗಳು ಬರೆದಿವೆ.

ಅಂತೆಯೇ ಎಚ್ಐವಿ ಹಾಗೂ ಇತರ ವಿಚಿತ್ರ ರೋಗಗಳಿರುವವರು ಜಿ.ಬಿ.ರೋಡ್ ಪ್ರವೇಶಿಸದಂತೆ ನಿರ್ಬಂಧಿಸಬೇಕು. ಇದು ಲೈಂಗಿಕ ಕಾರ್ಯಕರ್ತೆಯರ ಆರೋಗ್ಯ ಕಾಪಾಡುವುದಕ್ಕಾಗಿ ಎಂದೂ ಈ ಸಂಸ್ಥೆಗಳು ಒತ್ತಾಯಿಸಿವೆ.

ಪ್ರತಿದಿನ ಇಲ್ಲಿನ ವೇಶ್ಯೆಯರಿಗೆ ಒಂದು ಗಂಟೆ ಇಂಗ್ಲಿಷ್ ಕಲಿಸಲಾಗುತ್ತಿದೆ. ಹಲೋ, ಹೌ ಆರ್ ಯು, ಪ್ಲೀಸ್ ಯೂಸ್ ಕಾಂಡೋಮ್ ಎಂದೆಲ್ಲಾ ಹೇಳುವುದನ್ನು ಅವರು ಕಲಿತಿದ್ದಾರೆ.

ಇಲ್ಲಿ ಪೊಲೀಸರೂ ಆಗಾಗ್ಗೆ ಬಂದು ಕಾಟ ಕೊಡುತ್ತಾರೆ ಮತ್ತು ನಮ್ಮ ಗ್ರಾಹಕರನ್ನು, ವಿಶೇಷವಾಗಿ ಪ್ರವಾಸಿಗರನ್ನು ಹಣ ಮಾಡುವ ಉದ್ದೇಶದಿಂದ ಹೆದರಿಸುತ್ತಿದ್ದಾರೆ. ಅಂಥವರಿಗೆ ನಾವು ಕೂಡ ಸಣ್ಣಪುಟ್ಟ 'ಉಡುಗೊರೆ' ಕೊಡಬೇಕಾಗುತ್ತದೆ ಎಂದು ಆಂಧ್ರಪ್ರದೇಶ ಮೂಲದ ವೇಶ್ಯೆಯೊಬ್ಬಳು ಹೇಳುತ್ತಾಳೆ.

ಅಂತೂ, ಕಾಮನ್‌ವೆಲ್ತ್ ಗೇಮ್ಸ್‌ನಿಂದ ವಿಭಿನ್ನ ಉದ್ಯಮಗಳ ವಹಿವಾಟು ಪ್ರಗತಿಯ ನಿರೀಕ್ಷೆಯಲ್ಲಿರುವಂತೆಯೇ, ಸೆಕ್ಸ್ ಉದ್ಯಮದ ಬೆಳವಣಿಗೆಗೂ ಸ್ಕೆಚ್ ಹಾಕಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ