ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಪ್ರತ್ಯಕ್ಷ'ನಾದ ಮೊದಲ ಪತಿ ಬಳಿ ಹೋಗಲು ಪಂಚಾಯ್ತಿ ಆದೇಶ (Gudia | Panchayat Verdict | Two husbands | Roshan | Gaffar | Irshad)
Bookmark and Share Feedback Print
 
ಗುಡಿಯಾ ಎಂಬ ಹುಡುಗಿಯ ಘಟನೆಯಂಥದ್ದೇ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಮರು ಮದುವೆಯಾಗಿದ್ದ ಮುಸ್ಲಿಂ ಮಹಿಳೆಯೊಬ್ಬಳು, ತನ್ನ ಮೊದಲ ಗಂಡನ ಬಳಿಗೆ ಹಿಂತಿರುಗುವಂತೆ ಆದೇಶ ನೀಡಿದೆ. ಇದಕ್ಕೆ ಕಾರಣವೆಂದರೆ, ಐದು ವರ್ಷಗಳಿಂದ ನಾಪತ್ತೆಯಾಗಿದ್ದ ಆತ ಮರಳಿ ಬಂದಿರುವುದು!

ರೋಶನ ಎಂಬಾಕೆಗೆ ಇರ್ಷಾದ್ ಜೊತೆಗೆ 11 ವರ್ಷಗಳ ಹಿಂದೆ ಮದುವೆಯಾಗಿತ್ತು ಮತ್ತು ಇಬ್ಬರು ಮಕ್ಕಳೂ ಇದ್ದರು. ಐದು ವರ್ಷಗಳ ನಂತರ ಇರ್ಷಾದ್ ನಾಪತ್ತೆಯಾದ. ನಾಲ್ಕೈದು ವರ್ಷ ಕಳೆದರೂ ಆತನ ಪತ್ತೆಯಾಗದಿದ್ದಾಗ, ರೋಶನಳ ವಿವಾಹವು ಗಫರ್ ಎಂಬಾತನ ಜೊತೆಗೆ ನಡೆಯಿತು.

ಆದರೆ, ಈ ಎರಡನೇ ವಿವಾಹವು 'ಅಮಾನ್ಯ' ಎಂದು ತೀರ್ಪು ನೀಡಿರುವ ಮಿರನ್‌ಪುರದ ಸ್ಥಳೀಯ ಸಮುದಾಯ ಪಂಚಾಯತಿ ಕಟ್ಟೆಯು, ಮೊದಲ ಪತಿ ಬಳಿ ಹಿಂತಿರುಗುವಂತೆ ರೋಶನಳಿಗೆ ನಿರ್ದೇಶನ ನೀಡಿದೆ.

ಮೀರತ್‌ನ ಮುಂಡಳಿ ಗ್ರಾಮದಲ್ಲಿ ದಶಕದ ಹಿಂದೆ ನಡೆದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಡಿಯಾ ಎಂಬಾಕೆಯ ಪರಿಸ್ಥಿತಿಯೇ ರೋಶನಳಿಗೂ ಎದುರಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭ ಆಕೆಯ ಪತಿ ಆರಿಫ್ ನಾಪತ್ತೆಯಾಗಿದ್ದ. ಬಳಿಕ ತೌಫೀಕ್ ಎಂಬಾತನನ್ನು ಗುಡಿಯಾ ವಿವಾಹವಾಗಿದ್ದಳು. ಯುದ್ಧವೆಲ್ಲ ಮುಗಿದು ಆರಿಫ್ ಮರಳಿ ಬಂದಾಗ, ತೌಫೀಕ್ ಜತೆ ತನ್ನ ಪತ್ನಿಗೆ ವಿವಾಹವಾಗಿದ್ದು ತಿಳಿದು ಆರಿಫ್ ಆಘಾತಗೊಂಡಿದ್ದ. ಗ್ರಾಮದ ಪಂಚಾಯತಿಕಟ್ಟೆಯು ಸಭೆ ಸೇರಿ, ಎಲ್ಲರೂ ನಿರ್ಣಯಿಸಿದ ಬಳಿಕ ಗುಡಿಯಾಳನ್ನು ಆರಿಫ್ ಬಳಿಗೆ ಮರಳಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ