ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಭೆಗೆ ಗೈರು: ಮಮತಾ-ಯುಪಿಎ ನಡುವೆ ಶೀತಲಸಮರ? (Mamata Banerjee | Jharkhand | United Progressive Alliance | Manmohan Singh)
Bookmark and Share Feedback Print
 
ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮಂಗಳವಾರ ಬೆಳಿಗ್ಗೆ ಕರೆಯಲಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಗೆ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಗೈರುಹಾಜರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯುಪಿಎ ಮತ್ತು ಮಮತಾ ನಡುವೆ ಶೀತಲ ಸಮರ ನಡೆಯುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಆದರೆ ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಮತಾ, ಛೇ...ಆಡಳಿತಾರೂಢ ಯುಪಿಎ ಜತೆ ಯಾವುದೇ ಸಂಘರ್ಷ ಇಲ್ಲ. ಆ ನಿಟ್ಟಿನಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ನಾವು ಎಲ್ಲ ರೀತಿಯಿಂದಲೂ ಸಂತೃಪ್ತರಾಗಿದ್ದೇವೆ ಎಂದರು.

ಸಚಿವ ಸಂಪುಟ ಸಭೆ ಕೇವಲ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕರೆದದ್ದು, ತಾನು ಬೇರೊಂದು ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಸಾಗುತ್ತಿದ್ದ ವೇಳೆ ಹಳಿಸ್ಫೋಟಿಸಿ ದುರಂತ ಸಂಭವಿಸಿದ ಘಟನೆ ಕುರಿತಂತೆ ಸಿಬಿಐಗೆ ಒಪ್ಪಿಸಬೇಕೆಂಬುದು ಮಮತಾ ಬ್ಯಾನರ್ಜಿ ಆಗ್ರಹವಾಗಿದೆ. ಅಲ್ಲದೇ ಈ ಘಟನೆಯ ಹಿಂದೆ ರಾಜಕೀಯ ಪಿತೂರಿ ಇರುವುದಾಗಿಯೂ ಬ್ಯಾನರ್ಜಿ ಆರೋಪಿಸಿದ್ದರು. ಅದಕ್ಕೆ ತದ್ವಿರುದ್ದ ಎಂಬಂತೆ ದುಷ್ಕೃತ್ಯದ ಹಿಂದೆ ಮಾವೋ ಅಥವಾ ಅದರ ಅಂಗಸಂಸ್ಥೆಗಳ ಕೈವಾಡ ಇರುವುದಾಗಿ ಚಿದಂಬರಂ ಹೇಳಿಕೆ ಕೊಟ್ಟಿದ್ದರು.

ಅದಕ್ಕೆ ಪೂರಕ ಎಂಬಂತೆ ಮಮತಾ, ಘಟನೆ ಹಿಂದೆ ಮಾವೋವಾದಿಗಳು ಇದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಅದರ ಹಿಂದಿರುವ ಸತ್ಯ ಏನು ಎಂಬುದು ಹೊರಬರಲೇಬೇಕು ಎಂಬ ವಾದ ಮಮತಾ ಅವರದ್ದು. ಒಟ್ಟಾರೆ ಪಶ್ಚಿಮ ಬಂಗಾಳದಲ್ಲಿನ ಸಿಪಿಐಎಂ ಆಡಳಿತದ ವಿರುದ್ಧ ಕೆಂಡಕಾರುತ್ತಿರುವ ಮಮತಾ ಒಂದೆಡೆಯಾದರೆ, ಸಿಬಿಐ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿರುವ ಚಿದಂಬರಂ ಅವರ ಧೋರಣೆ ಮಮತಾ ಅಸಮಧಾನಕ್ಕೆ ಕಾರಣ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ