ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನ್ಮ ನೀಡಿದ ತಂದೆಯೇ ಮಗಳಿಗೆ ಆಸಿಡ್ ಎರಚಿದ! (Love Story | Uttar Pradesh | Acid Victim)
Bookmark and Share Feedback Print
 
ತನಗೆ ಜನ್ಮ ನೀಡಿದ ಅಪ್ಪನ ಕಾಮತೃಷೆಗೆ ಬಲಿಯಾದ ಹೆಣ್ಣುಮಕ್ಕಳ ಬಗ್ಗೆ ಕೇಳಿದ್ದೇವೆ. ಅಷ್ಟೇ ಅಲ್ಲ, ಪ್ರೀತಿಸು ಎಂದು ಕಾಡಿ ಹುಡುಗಿಯ ಮೇಲೆ ಆಸಿಡ್ ಎರಚುವ ಯುವಕರ ಬಗ್ಗೆಯೂ ಕೇಳಿದ್ದೇವೆ. ಆದರೆ ಈ ಘಟನೆ ಅಂಥದ್ದಲ್ಲ. ಇದೊಂದು ಹೃದಯವಿದ್ರಾವಕ ಘಟನೆ. ತನ್ನ ಮಗಳು ಅನ್ಯ ಧರ್ಮಕ್ಕೆ ಸೇರಿದಾತನನ್ನು ಪ್ರೀತಿಸಿದ್ದಾಳೆಂಬ ಒಂದೇ ಕಾರಣಕ್ಕೆ ಸ್ವಂತ ಅಪ್ಪನೇ ಮಗಳ ಮೇಲೆ ಆಸಿಡ್ ಎರಚಿ ಕಾಲುವೆಗೆ ತಳ್ಳಿದ ಕಥೆಯಿದು.

ಹೌದು. ಈ ಕಥೆಯಲ್ಲಿ ಅಪ್ಪನೇ ವಿಲನ್. ಬುಲಂದ್‌ಶೇರ್ ಜಿಲ್ಲೆಯ ಚರೌರಾ ಗ್ರಾಮದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಇದನ್ನು ಪೊಲೀಸರು ಮರ್ಯಾದಾ ಹತ್ಯೆ ಪ್ರಯತ್ನ ಎಂದು ಪೊಲೀಸರು ಶಂಕಿಸಿದ್ದಾರೆ.

ತಂದೆಯಿಂದ ಆಸಿಡ್ ದಾಳಿಗೆ ಒಳಗಾದ ಯುವತಿಯನ್ನು ಗುಲಿಸ್ತಾನ್ (18) ಎಂದು ಗುರುತಿಸಲಾಗಿದ್ದು, ಆಕೆ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಕಳೆದ ಕೆಲವು ವರ್ಷಗಳಿಂದ ಗುಲಿಸ್ತಾನ್ ರವೀಂದರ್(20) ಎಂಬ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಇಬ್ಬರೂ, ಮನೆಯಲ್ಲಿ ವಿರೋಧವಿದ್ದುದರಿಂದ ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದರು. ನಂತರ ಇವರನ್ನು ದೆಹಲಿಯಲ್ಲಿ ಪತ್ತೆ ಮಾಡಿ ಆಕೆಯನ್ನು ಗ್ರಾಮಕ್ಕೆ ಕರೆತರಲಾಗಿತ್ತು. ಜೊತೆಗೆ ಇವರಿಬ್ಬರ ಮದುವೆಗೆ ನಮ್ಮ ಸಮ್ಮತಿಯಿದೆ ಎಂದು ಹೆತ್ತವರು ತಿಳಿಸಿದ್ದರು.

ಆದರೆ ಅಪ್ಪ ಅಮ್ಮ ಮದುವೆ ಮಾಡುತ್ತೇವೆ ಎಂದು ಹೇಳಿರುವ ಹಿಂದೆ ನಾಟಕ ಅಡಗಿದೆ ಎಂಬ ವಿಷಯ ಮಾತ್ರ ಗುಲಿಸ್ತಾನ್‌ಗೆ ಗೊತ್ತಿರಲಿಲ್ಲ. ಅಪ್ಪನೇ ನಿಂತು ಮದುವೆ ಮಾಡಿಸುತ್ತೇನೆ ಎಂದರೆ ಯಾವ ಮಗಳು ತಾನೇ ಖುಷಿ ಪಡಲ್ಲ ಹೇಳಿ. ಹಾಗೆಯೇ ಗುಲಿಸ್ತಾನ್ ಸಂತಸದಿಂದಿದ್ದಳು. ಜೊತೆಗೆ ಅಪ್ಪ ಹಾಗೂ ಸಹೋದರ ಇಬ್ಬರೂ ಗುಲಿಸ್ತಾನ್‌ಳನ್ನು ಮದುವೆಗಾಗಿ ಬಟ್ಟೆ ಖರೀದಿಸೋಣ ಎಂದು ದೆಹಲಿಗೆ ಕರೆತಂದಿದ್ದರು. ಆಗಲೇ ಈ ಇಬ್ಬರೂ ಸೇರಿ ಗುಲಿಸ್ತಾನ್ ಮೇಲೆ ಆಸಿಡ್ ಎರಚಿ ಕಾಲುವೆಗೆ ತಳ್ಳಿ ಪರಾರಿಯಾಗಿದ್ದಾರೆ.

ಆದರೆ ಕಾಲುವೆಯಲ್ಲಿ ನೀರಿನಲ್ಲಿ ಮುಳುಗೇಳುತ್ತಾ ಸಹಾಯಕ್ಕಾಗಿ ಕೂಗಿಕೊಂಡ ಆಕೆಯನ್ನು ಅಲ್ಲೇ ಆಟವಾಡುತ್ತಿದ್ದ ಬಾಲಕರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಆಕೆಯ ಅಪ್ಪನನ್ನು ಬಂಧಿಸಿದ್ದಾರೆ. ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ