ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿಂಗಳಿಗೆ 10 ಸಾವಿರ ದುಡಿಯುವ 'ಸೆಕ್ಯುರಿಟಿ' ಕಪಿರಾಯ! (Langur earns 10,000 per month in Kanpur!)
Bookmark and Share Feedback Print
 
WD
ಉದ್ಯೋಗಕ್ಕಾಗಿ ಮಾನವರೇ ಪರದಾಡುತ್ತಿರುವ ಈ ದಿನಗಳಲ್ಲಿ, ಮಾನವನ ಪೂರ್ವಜನೆಂದು ಪರಿಗಣಿಸಲ್ಪಟ್ಟಿರುವ ಕೋತಿಯೊಂದು ತಿಂಗಳಿಗೆ ಹತ್ತು ಸಾವಿರ ವರಮಾನ ಸಂಪಾದಿಸುತ್ತದೆ ಎಂದರೆ ಅಚ್ಚರಿಯಾಗಬೇಕಲ್ಲವೇ? ಹೌದು. ಇಂತಹಾ ವಿದ್ಯಮಾನ ಕಾನ್ಪುರದಿಂದ ವರದಿಯಾಗಿದೆ.

ಉತ್ತರ ಪ್ರದೇಶದ ಈ ಪಟ್ಟಣದಲ್ಲಿ ಕರಿ ಮಂಗವೊಂದು ಜನರನ್ನು ಆಕರ್ಷಿಸತೊಡಗಿದೆ. ಇದಕ್ಕೆ ಕಾರಣವೆಂದರೆ, ಈ ಮಂಗನಿಗೆ ಉದ್ಯೋಗ ದೊರೆತಿರುವುದು ಕಚೇರಿಗಳನ್ನು ಮತ್ತು ಸ್ಥಳೀಯರನ್ನು ಕಾವಲು ಕಾಯುವ ಸೆಕ್ಯುರಿಟಿ ಗಾರ್ಡ್ ಕೆಲಸ!

ವಿಷಯ ಇಷ್ಟೇ. ಈ ಪ್ರದೇಶದಲ್ಲಿ ವಿಪರೀತ ಮಂಗಗಳ ಹಾವಳಿ. ಪ್ರತಿದಿನದ ಈ ಸಮಸ್ಯೆಗೆ ಪರಿಹಾರ ದೊರೆಯದೇ ವಿವಶರಾದ ಕಾರ್ಮಿಕರ ರಾಜ್ಯ ವಿಮಾ ಸಂಸ್ಥೆ (ಇಎಎಸ್ಐಸಿ) ಅಧಿಕಾರಿಗಳು, ಮಂಗಗಳ ಜಾತಿಯಲ್ಲೇ ವಿಶಿಷ್ಟವಾಗಿರುವ ಲಂಗೂರ್ (ಸಾಮಾನ್ಯವಾಗಿ ಮುಜು, ಮುಸುವ ಎಂದು ಕರೆಯಲಾಗುವ ಕಪ್ಪು ಮುಖದ ಕಪಿ) ಒಂದನ್ನು ಕಾವಲುಗಾರನ ಕೆಲಸಕ್ಕೆ ನಿಯೋಜಿಸಿದ್ದಾರೆ.

ನೌಕರರು ಮತ್ತು ಪರಿಸರದ ಜನರನ್ನು ಮಂಗಗಳ ದಾಳಿಯಿಂದ ಕಾಪಾಡುವುದು ಈ ಲಂಗೂರ್ ಕೋತಿಯ ಕೆಲಸ.

ಲಾಂಗೂರ್ ಕಪಿಯು ನಮ್ಮ ಕ್ಯಾಂಪಸ್ಸಿನಲ್ಲಿದ್ದರೆ, ಇತರ ಕೋತಿಗಳು ಇತ್ತ ತಲೆ ಹಾಕುವ ಧೈರ್ಯ ಮಾಡುವುದಿಲ್ಲ ಎನ್ನುತ್ತಾರೆ ಇಎಸ್ಐಸಿ ಉಪ ನಿರ್ದೇಶಕ ಪ್ರಕಾಶ್ ಚಂದ್ರ ಶರ್ಮಾ.

ಕಚೇರಿಯಲ್ಲಿರುವ ಫೈಲುಗಳನ್ನೆಲ್ಲಾ ಹರಿದು, ಚೆಲ್ಲಾಪಿಲ್ಲಿ ಮಾಡುತ್ತಿದ್ದ ಇತರ ಮಂಗಗಳು, ಸುತ್ತಮುತ್ತ ಆಡುತ್ತಿರುವ ಮಕ್ಕಳನ್ನೂ ಬೆದರಿಸುತ್ತಿದ್ದವು. ಇದರಿಂದಾಗಿ ಮಕ್ಕಳೆಲ್ಲಾ ಮನೆಯಿಂದ ಹೊರಗೆ ಬರುವುದಕ್ಕೇ ಹೆದರುತ್ತಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಇದೀಗ ಈ 'ಹೊಸ ಉದ್ಯೋಗಿ'ಯು ಕ್ಯಾಂಪಸ್‌ನ ದ್ವಾರದಲ್ಲಿ ಇತರ ಕಾವಲುಗಾರರಂತೆಯೇ ಕುಳಿತುಕೊಳ್ಳುತ್ತದೆ ಮತ್ತು ಆ ಪ್ರದೇಶಕ್ಕೆ ಮಂಗಗಳು ಬಾರದಂತೆ ನೋಡಿಕೊಳ್ಳುತ್ತದೆ.

ಅದು ಸರಿ, ಈ ಕಪಿರಾಯನ ಮಾಸಿಕ ವೇತನ ಎಷ್ಟು? ಪ್ರತೀ ತಿಂಗಳು ಅದರ ಮಾಲೀಕನಿಗೆ 10 ಸಾವಿರ ರೂಪಾಯಿ ದೊರೆಯುತ್ತದೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಪಿ, ಕಾವಲುಗಾರ, ಕೋತಿ, ಮುಜು, ಮುಸುವ