ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಹಿನೂರ್ ವಜ್ರ ವಾಪಸ್ ಕೊಡಿ: ಬ್ರಿಟನ್‌ಗೆ ಭಾರತ (Kohinoor diamond | Sultanganj Buddha | artifacts | Gautam Sengupta)
Bookmark and Share Feedback Print
 
ಅಂದು ಬ್ರಿಟಿಷರು ಕೇವಲ ನಮ್ಮನ್ನು ಆಳಿದ್ದು ಮಾತ್ರವಲ್ಲ, ಭಾರತ ಬಿಟ್ಟು ತೊಲಗುವಾಗ ದೇಶದ ಅಮೂಲ್ಯ ವಸ್ತುಗಳನ್ನು ಹೊತ್ತಿಯ್ದಿದ್ದರು. ಅದರಲ್ಲಿ ಬೆಲೆ ಕಟ್ಟಲಾಗದ ಕೊಹಿನೂರ್ ವಜ್ರ, ಸುಲ್ತಾನ್‌ಗಂಜ್ ಬುದ್ಧನ ಬೃಹತ್ ಕಂಚಿನ ವಿಗ್ರಹ ಕೂಡ ಸೇರಿದೆ. ಹಾಗಾಗಿ ಅವೆಲ್ಲ ಅಮೂಲ್ಯ ವಸ್ತುಗಳನ್ನು ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ಭಾರತದ ಪುರಾತತ್ವಶಾಸ್ತ್ರ ಇಲಾಖೆ( ಎಎಸ್ಐ) ಅಂತಾರಾಷ್ಟ್ರೀಯ ನೆಟ್‌ವರ್ಕ್ ಜೊತೆ ಕೈಜೋಡಿಸಲು ಮುಂದಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಭಾರತದ ಹಲವಾರು ಅತ್ಯಮೂಲ್ಯ ವಸ್ತುಗಳು ಬ್ರಿಟಿಷ್ ವಸ್ತುಸಂಗ್ರಹಾಲಯ, ದಿ ರಾಯಲ್ ಕಲೆಕ್ಷನ್, ಬರ್ಮಿಂಗ್‌ಹ್ಯಾಮ್ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯಲ್ಲಿ ಇದ್ದು, ಅವೆಲ್ಲವೂಗಳನ್ನು ಮತ್ತೆ ಭಾರತಕ್ಕೆ ಮರಳಿ ತರಲು ರಾಜತಾಂತ್ರಿಕ ಮತ್ತು ಕಾನೂನು ಸಂಬಂಧಿ ಹೋರಾಟ ನಡೆಸುವುದಾಗಿ ಎಎಸ್ಐ ಪ್ರಧಾನ ನಿರ್ದೇಶಕ ಗೌತಮ್ ಸೇನ್‌ಗುಪ್ತಾ ತಿಳಿಸಿದ್ದಾರೆ.

ಅತ್ಯಪೂರ್ವ ವಸ್ತುಗಳನ್ನು ವಾಪಸು ಪಡೆಯಲು ಭಾರತ ಸುಮಾರು ದಶಕಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿದೆ. ಆ ನೆಲೆಯಲ್ಲಿ ಯುನೆಸ್ಕೋ, ಈಜಿಪ್ಟ್, ಗ್ರೀಕ್ ದೇಶಗಳೊಂದಿಗೆ ಕೈಜೋಡಿಸಿ ಅವುಗಳ ಬೆಂಬಲದೊಂದಿಗೆ ಹೋರಾಟ ನಡೆಸುವುದಾಗಿ ಹೇಳಿದರು.

ಭಾರತದಿಂದ ಅಪಹರಿಸಲ್ಪಟ್ಟ ಅತ್ಯಮೂಲ್ಯ ವಸ್ತುಗಳನ್ನು ಭಾರತಕ್ಕೆ ತರಲು ಯಶಸ್ಸು ಸಾಧಿಸಬೇಕಿದ್ದರೆ ಯುನೆಸ್ಕೋ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರಾಂದೋಲನ ಅಗತ್ಯ ಎಂದು ಒತ್ತಿ ಹೇಳಿದರು. ಇದು ಕೇವಲ ಭಾರತ ದೇಶವೊಂದರ ಕಥೆ ಮಾತ್ರವಲ್ಲ, ಮೆಕ್ಸಿಕೋ, ಪೆರು, ಚೀನಾ, ಬೋಲಿವಿಯಾ, ಸೈಪ್ರಸ್ ಮತ್ತು ಗ್ವಾಟೆಮಾಲಾ ದೇಶಗಳಿಂದಲೂ ಅತ್ಯಮೂಲ್ಯ ವಸ್ತುಗಳನ್ನು ಕದ್ದೂಯ್ದು ವಿದೇಶದ ಮ್ಯೂಸಿಯಂಗಳಲ್ಲಿ ಇರಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಈ ಎಲ್ಲಾ ದೇಶಗಳೊಂದಿಗೆ ಭಾರತವೂ ಕೂಡ ಕೈಜೋಡಿಸಲಿದೆ ಎಂದು ಗುಪ್ತಾ ವಿವರಿಸಿದರು.

ಒಂದು ವೇಳೆ ಈ ಸಾಮೂಹಿಕ ಹೋರಾಟದ ಪ್ರಯತ್ನ ಕೈಗೂಡಿದರೆ ಭಾರತ ಹಲವಾರು ಅತ್ಯಮೂಲ್ಯ ವಸ್ತುಗಳನ್ನು ವಾಪಸು ಪಡೆಯಲಿದೆ ಎಂದು ಅವರು ಮಾಧ್ಯಮವೊಂದರ ಜೊತೆ ಮಾತನಾಡುತ್ತ ವಿವರಿಸಿದರು. ಯಾವೆಲ್ಲ ವಸ್ತುಗಳು ಲಂಡನ್, ಬ್ರಿಟನ್ ಸೇರಿದಂತೆ ವಿವಿಧ ಮ್ಯೂಸಿಯಂಗಳಲ್ಲಿ ಇದೆ ಎಂಬ ಪಟ್ಟಿ ತಯಾರಾಗಿದೆ. ಭಾರತ ಸೇರಿದಂತೆ ಉಳಿದೆಲ್ಲಾ ದೇಶಗಳು ಮುಂದಿನ ಹೆಜ್ಜೆ ಇಡಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ