ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಳ ಸಿಎಂ ಗದ್ದುಗೆ ಏರುವುದು ಮಮತಾ ಗುರಿ! (Mamata Banerjee | Kolkata | Congress | Trinamool Congress | Lok Sabha)
Bookmark and Share Feedback Print
 
ಪಶ್ಚಿಮಬಂಗಾಳದಲ್ಲಿನ ಆಡಳಿತಾರೂಢ ಕಮ್ಯೂನಿಷ್ಟರ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿರುವ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಷನ್‌ ಚುನಾವಣೆಯಲ್ಲಿಯೂ ಕೆಂಪುಕೋಟೆ ವಿರುದ್ಧ ಜಯ ಸಾಧಿಸಿದ್ದಾರೆ. ಇದೀಗ ಶತಾಯಗತಾಯ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಗದ್ದುಗೆ ಏರುವುದೇ ಮುಂದಿನ ಗುರಿಯಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೂ ಮುನ್ನ ನಡೆದ ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಸೆಮಿ ಫೈನಲ್ ಎಂದೇ ಬಿಂಬಿತವಾಗಿತ್ತು. ಅಂತೂ ಆಡಳಿತಾರೂಢ ಎಡಪಕ್ಷಗಳ ಲೆಕ್ಕಚಾರ ತಲೆಕೆಳಗಾಗಿದ್ದು, ಮಮತಾ ನೇತೃತ್ವದ ತೃಣಮೂಲ ಜಯಭೇರಿ ಬಾರಿಸುವ ಮೂಲಕ ಪಶ್ಚಿಮಬಂಗಾಳದ ಅಧಿಕಾರದ ಗದ್ದುಗೆ ಏರುವ ಮುನ್ಸೂಚನೆ ಕೊಟ್ಟಂತಾಗಿದೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಯೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಮಮತಾ ಘೋಷಿಸಿದ್ದಾರೆ.

2008ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ತೃಣಮೂಲ ಕಾಂಗ್ರೆಸ್ ಶೇ.50ರಷ್ಟು ಗೆಲುವು ಸಾಧಿಸಿತ್ತು. ಇದೀಗ ಬಂಗಾಳದ ನಗರ ಮತ್ತು ಕೋಲ್ಕತಾದಲ್ಲಿ ನಡೆದ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿಯೂ ತೃಣಮೂಲ ಬಹುಮತ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಎಡಪಕ್ಷದ ಜನವಿರೋಧಿ ನೀತಿಯಿಂದ ರೋಸಿ ಹೋದ ಮತದಾರ ತೃಣಮೂಲ ಕಾಂಗ್ರೆಸ್‌ನತ್ತ ವಾಲಿರುವುದು ಈ ಚುನಾವಣೆಯಲ್ಲಿಯೂ ಸಾಬೀತಾಗಿದೆ. ಹಾಗಾಗಿ ತೃಣಮೂಲ ಕಾಂಗ್ರೆಸ್ ಅಚ್ಚರಿಕರ ರೀತಿಯಲ್ಲಿ 141 ವಾರ್ಡ್‌ಗಳಲ್ಲಿ 95 ಸೀಟುಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದೆ. ಕೆಂಪುಕೋಟೆಯನ್ನು ಸಂಪೂರ್ಣವಾಗಿ ತೃಣಮೂಲದ ವಶಕ್ಕೆ ತೆಗೆದುಕೊಳ್ಳಲು ಪಣತೊಟ್ಟಿರುವ ಮಮತಾ ಬ್ಯಾನರ್ಜಿ ಹಂತ, ಹಂತವಾಗಿ ಯಶಸ್ಸು ಸಾಧಿಸಿದ್ದು, ಈ ಸಮರ ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಮುಂದುವರಿಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ