ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಳವೆ ಬಾವಿಯಿಂದ ಮೇಲೆತ್ತಿದ ಬಾಲಕಿ ಸಾವು (Borewell | Girl | Batala | Dilrajpreet Kaur | Prince | Rescue)
Bookmark and Share Feedback Print
 
200 ಅಡಿ ಆಳದ ಕೊಳವೆ ಬಾವಿಯೊಳಗೆ ಬುಧವಾರ ಬಿದ್ದ ಪುಟ್ಟ ಬಾಲಕಿಯನ್ನು ಸತತ ಪರಿಶ್ರಮದ ಬಳಿಕ ಕೊನೆಗೂ ಗುರುವಾರ ಮೇಲೆತ್ತಲಾಯಿತಾದರೂ, ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ಪಂಜಾಬ್ ಗುರುದಾಸಪುರದಿಂದ ವರದಿಯಾಗಿದೆ.

ಭಾರತೀಯ ಸೇನೆಯ ಯೋಧರು ಕೂಡ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅವರು ಸತತ 24 ಗಂಟೆಗಳ ಪರಿಶ್ರಮಪಟ್ಟಿದ್ದರು. ಪಂಜಾಬಿನ ಗುರುದಾಸಪುರ ಜಿಲ್ಲೆಯ ಧೀರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತನ್ನ ಚಿಕ್ಕಪ್ಪನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ದಿಲ್‌ರಾಜ್‌ಪ್ರೀತ್ ಕೌರ್ ಎಂಬ ಬಾಲಕಿಯು ಆಕಸ್ಮಿಕವಾಗಿ ಕೊಳವೆ ಬಾವಿಯೊಳಗೆ ಬಿದ್ದಿದ್ದಳು.

200 ಅಡಿ ಆಳದ ಕೊಳವೆ ಬಾವಿಯೊಳಗೆ ಕನಿಷ್ಠ 30 ಅಡಿ ಕೆಳಗೆ ಆಕೆ ಸಿಕ್ಕಿಬಿದ್ದಿದ್ದಳು. ಸೇನೆಯ ಅಧಿಕಾರಿಗಳು ಪಕ್ಕದಲ್ಲೇ ಹೊಂಡ ಅಗೆದು ಬಾಲಕಿಯನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆಸ್ಪತ್ರೆಗೆ ಸೇರಿಸಿದ ಬಳಿಕ, ಆಕೆ ಉಸಿರಾಟದ ತೊಂದರೆ ಮತ್ತು ದೈಹಿಕ ಬಳಲಿಕೆಯಿಂದ ಕೊನೆಯುಸಿರೆಳೆದಿದ್ದಾಳೆ.

2006ರಲ್ಲಿ ಹರ್ಯಾಣದ ಷಹಾಬಾದ್ ಎಂಬಲ್ಲಿ ಐದು ವರ್ಷದ ಪ್ರಿನ್ಸ್ 53 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದು, ಆತನನ್ನು ಎರಡು ದಿನಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ