ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೈಂಗಿಕ ಕಿರುಕುಳ: ಲೆ.ಜನರಲ್ ಹುದ್ದೆಗೆ ಬಲವಂತದ ರಾಜೀನಾಮೆ (Army | sexual misconduct | A K Nanda | Israel | Bharti Singh,)
Bookmark and Share Feedback Print
 
ಸಹೋದ್ಯೋಗಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಆರ್ಮಿಯ ಲೆಫ್ಟಿನೆಂಟ್ ಜನರಲ್‌ರೊಬ್ಬರನ್ನು ಬಲವಂತವದಿಂದ ರಾಜೀನಾಮೆ ತೆಗೆದುಕೊಂಡ ಘಟನೆ ನಡೆದಿದ್ದು, ಲೈಂಕಿಗ ಕಿರುಕುಳದ ಆರೋಪದಿಂದಾಗಿ ಆರ್ಮಿ ತೀವ್ರ ಮುಜುಗರಕ್ಕೆ ಒಳಗಾಗಿತ್ತು.

ಕಳೆದ ತಿಂಗಳು ಇಸ್ರೇಲ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತನಗೆ ಲೆಫ್ಟಿನೆಂಟ್ ಜನರಲ್ ಎ.ಕೆ.ನಂದಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿ ದೂರು ನೀಡಿದ್ದರು. ಇದರಿಂದಾಗಿ ಆರ್ಮಿ ಪೇಚಿಗೆ ಸಿಲುಕಿತ್ತು. ಆ ನಿಟ್ಟಿನಲ್ಲಿ ನಂದಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಆರ್ಮಿ ವರಿಷ್ಠ ಜನರಲ್ ವಿ.ಕೆ.ಸಿಂಗ್ ಅವರಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ ಎಂದು ಆರ್ಮಿ ಮೂಲಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿವೆ.

ನಂದಾ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆರ್ಮಿಯ ಹಿರಿಯ ಅಧಿಕಾರಿಯಾಗಿರುವ ಅವರು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವುದು ಆರ್ಮಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಕಳೆದ ತಿಂಗಳು ನಂದಾ ಅವರು ತಮ್ಮ ಕುಟುಂಬದ ಜೊತೆಗೆ ಇಸ್ರೇಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿತ್ತು.

ನಂದಾ ಅವರ ಆರ್ಮಿಯ ಟೆಕ್ನಿಕಲ್ ಸೆಕ್ರೆಟರಿಯಾಗಿದ್ದ ಭಾರತಿ ಸಿಂಗ್ ಅವರು ಜನರಲ್ ವಿ.ಕೆ.ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ನಂದಾ ಅವರ ವಿಚಾರಣೆ ನಡೆಸಿದ ನಂತರ, ನಂದಾ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಏತನ್ಮಧ್ಯೆ ನಂದಾ ಅವರ ಟೆಕ್ನಿಕಲ್ ಸೆಕ್ರೆಟರಿಯಾಗಿದ್ದ ಭಾರತಿ ಅವರನ್ನು ಭೋಪಾಲ್‌ನಲ್ಲಿ ನಂದಾ ಜೊತೆ ಕಾರ್ಯನಿರ್ವಹಿಸುವಂತೆ ಈ ಹಿಂದೆ ಸೂಚಿಸಿದ್ದಾಗಲೂ, ತಾನು ಅವರ ಜೊತೆ ಕರ್ತವ್ಯ ನಿರ್ವಹಿಸಲಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರಂತೆ. ನಂತರ ಆ ಸ್ಥಾನಕ್ಕೆ ಕರ್ನಲ್ ಸಂಜೀವ್ ದಲಾಲ್ ಅವರನ್ನು ನೇಮಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ದಲಾಲ್ ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ