ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾವೋಗಳ ಬೆಂಬಲಿಸ್ತೀನಿ, ಬಂಧಿಸಿ ನೋಡೋಣ: ಅರುಂಧತಿ ರಾಯ್ (Maoist | Arundhati Roy | Naxal | Dantewada)
Bookmark and Share Feedback Print
 
PTI
"ಹೌದು, ನಾನು ಮಾವೋವಾದಿಗಳ ಪರ, ಅವರು ಬಂದು ನನ್ನನ್ನು ಬಂಧಿಸಲಿ ನೋಡೋಣವಂತೆ" -ಹೀಗೆಂದವರು ದೇಶದ ಪ್ರಮುಖ ಬುದ್ಧಿ ಜೀವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿರುವ ಲೇಖಕಿ, ಮಾನವಹಕ್ಕುಗಳ ಹೋರಾಟಗಾರ್ತಿ ಅರುಂಧತಿ ರಾಯ್.

ಮುಂಬೈಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಅವರು, ಮಾವೋವಾದಿಗಳ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ನೀಡಿರುವ ನಿರ್ದೇಶನವನ್ನು ಪ್ರಸ್ತಾಪಿಸುತ್ತಾ ಈ ಮಾತು ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ದಾಂತೆವಾಡದಲ್ಲಿ 76 ಸಿಆರ್‌ಪಿಎಫ್ ಯೋಧರನ್ನು ಹಿಂಸಾತ್ಮಕವಾಗಿ ಕೊಂದು ಹಾಕಿರುವುದಕ್ಕೆ ತನ್ನ ಸಂಪೂರ್ಣ ಖಂಡನೆ ಇದೆ ಎಂದಿರುವ ಆಕೆ, ಆದರೆ ಸರಕಾರಕ್ಕೂ ಈ ವಿಷಯದಲ್ಲಿ ತನ್ನ ಬೆಂಬಲ ಇಲ್ಲ ಎಂದಿದ್ದಾರೆ.

"ಈ ಆದಿವಾಸಿ ಹಳ್ಳಿಗಳಲ್ಲಿ ಎ.ಕೆ.-47 ಹಾಗೂ ಸ್ಟೆನ್ ಗನ್‌ಗಳನ್ನು ಹಿಡಿದು ಈ ಅರೆಸೈನಿಕ ಪಡೆಗಳು ಮಾಡುತ್ತಿದ್ದುದಾದರೂ ಏನನ್ನು? 'ಜನರ ಮೇಲೆ ಹೇರಲಾಗಿರುವ ಯುದ್ಧ'ದ ದೌರ್ಜನ್ಯದ ವಿಶ್ಲೇಷಣೆಯಲ್ಲಿ ನನಗೆ ನಂಬಿಕೆ ಇಲ್ಲ" ಎಂದು ಅರುಂಧತಿ ರಾಯ್ ಹೇಳಿದ್ದಾರೆ.

ದಾಂತೆವಾಡ ಅರಣ್ಯದಲ್ಲಿ ನಕ್ಸಲರೊಂದಿಗೆ ದಿನಗಳನ್ನು ಕಳೆದು, ಮಾವೋವಾದಿಗಳ ಮೇಲೆ ಅನುಕಂಪ ಹುಟ್ಟಿಸುವಂತಹ ಲೇಖನಗಳನ್ನು ಬರೆದು ಅವರನ್ನು ವೈಭವೀಕರಿಸಿದ್ದಕ್ಕಾಗಿ ಅರುಂಧತಿ ರಾಯ್ ಮತ್ತು ಪತ್ರಕರ್ತ, ಪ್ರಜಾ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ, ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ