ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈಯಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನಗಳ ಡಿಕ್ಕಿ (Mumbai | Air Collision Averted | King Fisher | Spice Jet | Airport)
Bookmark and Share Feedback Print
 
ಮಂಗಳೂರು ವಿಮಾನ ದುರಂತ, ಆ ನಂತರ ಸ್ವಲ್ಪದರಲ್ಲೇ ತಪ್ಪಿದ ವಿಮಾನಾಪಘಾತ... ಈ ಸರಣಿ ಮುಂದುವರಿದಿದ್ದು, ಮುಂಬೈಯಲ್ಲಿ ಗುರುವಾರ ರಾತ್ರಿ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗುವುದರಿಂದ ಸ್ವಲ್ಪದರಲ್ಲಿ ತಪ್ಪಿದೆ. ಇದರೊಂದಿಗೆ ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಿದ್ದಾರೆ ಎಂಬುದು ಬಟಾಬಯಲಾಗಿದೆ.

ತಾಂತ್ರಿಕ ತೊಂದರೆಯಿಂದಾಗಿ ಸ್ಪೈಸ್‌ಜೆಟ್ ವಿಮಾನ ನಿಂತಿದ್ದ ರನ್‌ವೇಯಲ್ಲೇ ಇಳಿಯಲು ಕಿಂಗ್‌ಫಿಶರ್ ವಿಮಾನಕ್ಕೆ ಹಸಿರು ನಿಶಾನೆ ಸಂಕೇತ ತೋರಿಸಲಾಗಿದ್ದು, ಒಂದು ನಿಮಿಷದ ಅಂತರದಲ್ಲಿ ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಬಚಾವ್ ಆಗಿದ್ದಾರೆ.

ಮುಂಬೈ-ಚೆನ್ನೈ ಸ್ಪೈಸ್‌ಜೆಟ್ ವಿಮಾನವು ರಾತ್ರಿ 11 ಗಂಟೆ ಸುಮಾರಿಗೆ ಹೊರಡಬೇಕಿತ್ತು. ಕೊನೆಕ್ಷಣದಲ್ಲಿ ತಾಂತ್ರಿಕ ತೊಂದರೆಯಿಂದ ಕಾಣಿಸಿಕೊಂಡ ಕಾರಣ, ಏರ್ ಟ್ರಾಫಿಕ್ ಕಂಟ್ರೋಲ್ ಘಟಕವು ಟೇಕಾಫ್ ಆಗದಂತೆ ಸೂಚನೆಯನ್ನೂ ನೀಡಿತ್ತು.

ಆದರೆ, ಅದೇ ವೇಳೆಗೆ, ದೆಹಲಿ-ಮುಂಬೈ ಕಿಂಗ್‌ಫಿಶರ್ ವಿಮಾನಕ್ಕೆ ಲ್ಯಾಂಡ್ ಆಗಲು ಅದೇ ರನ್‌ವೇಯಲ್ಲಿ ಕ್ಲಿಯರೆನ್ಸ್ ನೀಡಲಾಗಿತ್ತು. ಆದರೆ, ಕೊನೆಯ ನಿಮಿಷದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಘಟಕವು ಕಿಂಗ್‌ಫಿಶರ್ ಪೈಲಟ್‌ಗೆ, ಇಳಿಯದಂತೆ ಸೂಚನೆ ನೀಡಿದ ಕಾರಣ, ಆ ವಿಮಾನವು ಮರಳಿ ಮೇಲಕ್ಕೆ ಹೋಗಿ ಸ್ವಲ್ಪ ಹೊತ್ತು ಆಗಸದಲ್ಲೇ ತಿರುಗಾಟ ಮಾಡಿತು. ಮಗದೊಮ್ಮೆ ಕ್ಲಿಯರೆನ್ಸ್ ಸಿಕ್ಕ ಬಳಿಕ ಇಳಿಯಿತು.

ಮೇ 22ರಂದು ಮಂಗಳೂರಿನಲ್ಲಿ ವಿಮಾನ ದುರಂತ ಸಂಭವಿಸಿದ ಬಳಿಕ ಮೇ 27ರಂದು ಮುಂಬೈ ವಿಮಾನ ನಿಲ್ದಾಣದಲ್ಲೇ ಜೆಟ್ ಏರ್‌ವೇಸ್ ಮತ್ತು ಇಂಡಿಗೋ ವಿಮಾನಗಳು ಕೂಡ ಒಂದೇ ರನ್‌ವೇಯಲ್ಲಿ ಡಿಕ್ಕಿಯಾಗುವ ಸಾಧ್ಯತೆಗಳಿದ್ದದ್ದು, ಕೊನೆ ಕ್ಷಣದ ಸೂಚನೆಯಿಂದ ತಪ್ಪಿ ಹೋಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಂಬಂಧಿತ ಮಾಹಿತಿ ಹುಡುಕಿ